ಉಬರ್ ಚಾಲಕರು ಹಗಲು ಮತ್ತು ರಾತ್ರಿ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಆದರೆ ಕೆಲವೊಮ್ಮೆ ಸವಾರಿಯ ನಡುವೆ, ಅವರು ಊಟ ಸೇವಿಸಲು ಮತ್ತು ವಿಶ್ರಾಂತಿ ಪಡೆಯಲು ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುತ್ತಾರೆ. ಅದು ಆದಾಯವಿಲ್ಲದ ಅವಧಿ. ಆದರೆ ಮೇರಿಲ್ಯಾಂಡ್ ರೈಡ್-ಷೇರ್ ಡ್ರೈವರ್ ಪಡೆದ ವಿರಾಮವೇ ಆತನ ಜೀವನವನ್ನು ಬದಲಾಯಿಸಿದೆ.
ಟೀಂ ಇಂಡಿಯಾದ ಈ ಆಟಗಾರನಿಗೆ ಕೊನೆಯಾಗಲಿದೆ ಟಿ-20 ವಿಶ್ವಕಪ್…..?
69 ವರ್ಷದ ಚಾಲಕ ಸ್ಕ್ರಾಚ್-ಆಫ್ ಟಿಕೆಟ್ ಖರೀದಿಸಲು ಜೋಪ್ಪಾದಲ್ಲಿನ ಅಂಗಡಿಯೊಂದಕ್ಕೆ ತೆರಳಿದ್ದಾನೆ. ಅಲ್ಲಿ ಆತ 10 ಡಾಲರ್ ಗಳಿಸಿದ್ದಾನೆ. ನಂತರ ದೊಡ್ಡ ಲಾಟರಿಯನ್ನು ಖರೀದಿಸಲು ಟಿಕೆಟ್ ಸ್ಕ್ರ್ಯಾಚ್ ಮಾಡಿದಾಗ ಡಾಲರ್ 1,00,000 (ಸುಮಾರು 74 ಲಕ್ಷ ರೂ.) ಮೊತ್ತವನ್ನು ಪಡೆದುಕೊಂಡಿದ್ದಾನೆ.
ಐದು ವರ್ಷಗಳಿಂದ ಈತ ಉಬರ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಹಾಗೂ 24,000 ಕ್ಕೂ ಹೆಚ್ಚು ಸವಾರಿಗಳನ್ನು ಪೂರ್ಣಗೊಳಿಸಿದ್ದಾನೆ. ಗೆಲುವಿನ ಹಣವನ್ನು ತನ್ನ ಕಾರಿಗೆ ಸುಧಾರಣೆಗಳನ್ನು ತರಲು ಯೋಜಿಸಿರುವುದಾಗಿ ಹೇಳಿದ್ದಾನೆ.
ಕಳೆದ ವರ್ಷ, ಲಾಟರಿಯಲ್ಲಿ ಸುಮಾರು $1 ಮಿಲಿಯನ್ (ರೂ. 7.36 ಕೋಟಿ) ಗೆದ್ದ ವ್ಯಕ್ತಿಯೊಬ್ಬ ತನ್ನ ಎಲ್ಲಾ ಗೆಲುವನ್ನು ತನ್ನ ಕುಟುಂಬಕ್ಕೆ, ಆಪ್ತ ಸ್ನೇಹಿತರಿಗೆ ಮತ್ತು ಕಷ್ಟದಲ್ಲಿರುವ ಅಪರಿಚಿತರಿಗೆ ನೀಡಲು ನಿರ್ಧರಿಸಿದ್ದ.