alex Certify ಇಬ್ಬರು ಸೊಸೆಯಂದಿರ ಮಧ್ಯೆ ಮಲಗ್ತಿದ್ದ ಅತ್ತೆ..! ಪತಿಗಾಗಿ ಠಾಣೆ ತಲುಪಿದ ಪತ್ನಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಬ್ಬರು ಸೊಸೆಯಂದಿರ ಮಧ್ಯೆ ಮಲಗ್ತಿದ್ದ ಅತ್ತೆ..! ಪತಿಗಾಗಿ ಠಾಣೆ ತಲುಪಿದ ಪತ್ನಿಯರು

Two wives reached police station to complaint police ordered to Husband put a bed between two | UP: दो बीवियों के बीच चारपाई डालकर सोती थी सास, पति के लिए पहुंचीं थाने ।

ಉತ್ತರಪ್ರದೇಶದ ರಾಂಪುರದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬನ ಇಬ್ಬರು ಪತ್ನಿಯರು ಪೋಲಿಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತ್ನಿಯರ ಮಧ್ಯೆ ಯಾವುದೇ ಗಲಾಟೆಯಿಲ್ಲ. ಪತ್ನಿಯರ ಮಧ್ಯೆ ಅತ್ತೆ ಮಲಗುವುದೇ ಸಮಸ್ಯೆಯಾಗಿದೆ. ನಮ್ಮಿಬ್ಬರ ಮಧ್ಯೆ ಅತ್ತೆ ಮಲಗ್ತಾಳೆಂದು ಪತ್ನಿಯರು ದೂರು ನೀಡಿದ್ದಾರೆ.

ಖೇಡಾ ತಾಂಡಾದ ಫಿರಾಸತ್ 8 ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದ. ನಾಲ್ಕು ವರ್ಷಗಳ ನಂತ್ರ ಮತ್ತೊಂದು ಮದುವೆಯಾಗಿದ್ದಾನೆ. ಎರಡನೇ ಮದುವೆ ನಂತ್ರ ಮೊದಲ ಪತ್ನಿ ಗಲಾಟೆ ಮಾಡಿದ್ದಳು. ಆದ್ರೆ ಗ್ರಾಮಸ್ಥರು ಮನವೊಲಿಸಿದ ನಂತ್ರ ಇಬ್ಬರು ಪತ್ನಿಯರು ಒಟ್ಟಿಗೆ ವಾಸ ಶುರು ಮಾಡಿದ್ದರು. ಕೆಲ ದಿನಗಳ ನಂತ್ರ ಮತ್ತೆ ಜಗಳ ಶುರುವಾಗಿತ್ತು.

ಹೈಟೆಕ್ ಕಾಲ್ ಟ್ರಾಫಿಕಿಂಗ್ ದಂಧೆ; ಇಬ್ಬರ ಅರೆಸ್ಟ್

ವಿವಾದ ಹೆಚ್ಚಾಗ್ತಿದ್ದಂತೆ ಅತ್ತೆ ಇಬ್ಬರು ಪತ್ನಿಯರ ಮಧ್ಯೆ ಮಲಗಲು ಶುರು ಮಾಡಿದ್ದಳು. ಸೊಸೆಯಂದಿರಿಗೆ ಮಗನ ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ. ಇದ್ರಿಂದ ಬೇಸತ್ತ ಸೊಸೆಯಂದಿರು ಪೊಲೀಸ್ ಠಾಣೆಗೆ ಬಂದಿದ್ದಾರೆ. ನಾಲ್ಕು ಮಂದಿಯ ಮನವೊಲಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಅತ್ತೆ ಬದಲು ಪತ್ನಿಯರ ಮಧ್ಯೆ ಗಂಡ ಮಲಗಬೇಕೆಂದು ಸೂಚನೆ ನೀಡಿದ್ದಾರೆ. ಹಾಗೆ ಇಬ್ಬರು ಪತ್ನಿಯರಿಗೂ ಸಮಾನತೆ ನೀಡಬೇಕೆಂದು ಸೂಚನೆ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...