alex Certify ಮೆಚ್ಚುಗೆಗೆ ಪಾತ್ರವಾಗಿದೆ ಪೊಲೀಸ್‌ ಅಧಿಕಾರಿಗಳ ಮಾನವೀಯ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಚ್ಚುಗೆಗೆ ಪಾತ್ರವಾಗಿದೆ ಪೊಲೀಸ್‌ ಅಧಿಕಾರಿಗಳ ಮಾನವೀಯ ಕಾರ್ಯ

ಮೆಲ್ಬರ್ನ್‌‌ನ ಕೊರೆಯುವ ಚಳಿಯಲ್ಲಿ ನಡುಗುತ್ತಿದ್ದ ನಿರ್ಗತಿಕನೊಬ್ಬನಿಗೆ ಊಟ ಹಾಗೂ ಇತರೆ ಅಗತ್ಯ ವಸ್ತು ತೆಗೆದುಕೊಟ್ಟ ಇಬ್ಬರು ಪೊಲೀಸ್ ಅಧಿಕಾರಿಗಳು ನೆಟ್ಟಿಗರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಕೋವಿಡ್‌-19 ಲಾಕ್‌ಡೌನ್ ಕಾರಣದಿಂದ ಎಲ್ಲೆಡೆ ವ್ಯಾಪಾರ ನಿರ್ಬಂಧಗೊಂಡ ಕಾರಣ ನಿರ್ಗತಿಕ ಮಂದಿಗೆ ಆಹಾರ ಸಿಗುವುದು ಕಷ್ಟವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಇಂತವರು ಹೊಟ್ಟೆ ಹಸಿವಿನಿಂದ ಇರದಂತೆ ನೋಡಿಕೊಳ್ಳುತ್ತಿದ್ದಾರೆ ಮೆಲ್ಬರ್ನ್ ಪೊಲೀಸರು.

ಅದೀಲೇ ಬರ್ಬರೋ ಎಂಬ ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಕಥೆಯನ್ನು ಹಂಚಿಕೊಂಡಿದ್ದು, ಅಧಿಕಾರಿಗಳು ಚಿಕನ್ ಹಾಗೂ ಬ್ರೆಡ್ ರೋಲ್‌ಗಳನ್ನು ಖರೀದಿಸಿ, ವೆಚ್ಚವನ್ನು ಇಬ್ಬರೂ ಅರ್ಧ-ಅರ್ಧ ಹಂಚಿಕೊಂಡು ಆ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು ಪೊಲೀಸರ ಈ ಔದಾರ್ಯವನ್ನು ಶ್ಲಾಘಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...