alex Certify ಭೂಕಂಪದ ವೇಳೆ ಪ್ರಾಣ ಲೆಕ್ಕಿಸದೇ ಐಸಿಯುನಲ್ಲಿದ್ದ ಶಿಶುಗಳ ರಕ್ಷಣೆ; ದಾದಿಯರ ಮಾನವೀಯತೆ ಸಾರುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಕಂಪದ ವೇಳೆ ಪ್ರಾಣ ಲೆಕ್ಕಿಸದೇ ಐಸಿಯುನಲ್ಲಿದ್ದ ಶಿಶುಗಳ ರಕ್ಷಣೆ; ದಾದಿಯರ ಮಾನವೀಯತೆ ಸಾರುವ ವಿಡಿಯೋ ವೈರಲ್

ಒಂದು ವಾರದ ಹಿಂದೆ, ಟರ್ಕಿ ಮತ್ತು ಸಿರಿಯಾದಲ್ಲಿ ಜರುಗಿದ ಭೀಕರ ಭೂಕಂಪದ ದುರಂತ ಕ್ಷಣಗಳು ಇನ್ನೂ ಕಣ್ಮುಂದೆಯೇ ಇದೆ. ಭಯಾನಕ ಭೂಕಂಪಕ್ಕೆ ಇದುವರೆಗೂ 33 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡ್ತಿದ್ದು ಭೂಕಂಪನದ ಸಮಯದಲ್ಲಿ ದಾದಿಯರು ನವಜಾತ ಶಿಶುಗಳನ್ನು ರಕ್ಷಿಸುವ ಕಾರ್ಯ ನೆಟ್ಟಿಗರ ಹೃದಯ ಗೆದ್ದಿದೆ.

ವಿಪತ್ತಿನ ಸಂದರ್ಭದಲ್ಲಿ ತಮ್ಮ ಜೀವ ಉಳಿಸಿಕೊಳ್ಳುವ ಬದಲು ನವಜಾತ ಶಿಶುಗಳ ಜೀವಗಳನ್ನು ಉಳಿಸಲು ಆಯ್ಕೆ ಮಾಡಿದ ಇಬ್ಬರು ದಾದಿಯರ ಕಾರ್ಯ ಭಾರೀ ಮೆಚ್ಚುಗೆ ಗಳಿಸಿದೆ.

ಭೂಕಂಪ ಸಂಭವಿಸಿದಾಗ ತೀವ್ರ ನಿಗಾ ಘಟಕದಲ್ಲಿ (ICU) ಶಿಶುಗಳನ್ನು ಇರಿಸಲಾಗಿದ್ದ ಕೋಣೆಗೆ ಡೆವ್ಲೆಟ್ ನಿಜಾಮ್ ಮತ್ತು ಗಜ್ವಾಲ್ ಕಾಲಿಕ್ಸನ್ ಎಂದು ಗುರುತಿಸಲಾದ ಇಬ್ಬರು ನರ್ಸ್‌ಗಳು ಓಡುತ್ತಿರುವುದನ್ನು ಗಾಜಿಯಾಂಟೆಪ್‌ನ ಆಸ್ಪತ್ರೆಯ ಸಿಸಿ ಕ್ಯಾಮೆರಾ ವೀಡಿಯೊ ಕ್ಲಿಪ್ ತೋರಿಸುತ್ತದೆ.

ಹೆಚ್ಚಿನ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಹೊರಾಂಗಣಕ್ಕೆ ಓಡುತ್ತಿದ್ದರೆ, ಇಬ್ಬರು ದಾದಿಯರು ಬಂದು ಮಕ್ಕಳು ಕೆಳಗೆ ಬೀಳದಂತೆ ತಡೆಯಲು ಇನ್ಕ್ಯುಬೇಟರ್‌ಗಳ ಬಳಿ ನಿಂತರು. ಭೂಕಂಪದ ಉದ್ದಕ್ಕೂ, ಕೋಣೆಯೊಳಗೆ ಎಲ್ಲವೂ ಅಲುಗಾಡುತ್ತಿರುವಾಗ, ಧೈರ್ಯಶಾಲಿ ದಾದಿಯರು ತಮ್ಮ ಜೀವ ಮರೆತು ಶಿಶುಗಳನ್ನು ರಕ್ಷಿಸಿದರು.

ಅವರ ಈ ಸಾಹಸ ಕಾರ್ಯಕ್ಕೆ ಈಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ನವಜಾತ ಶಿಶುಗಳನ್ನು ರಕ್ಷಿಸುವ ಪ್ರತಿಯೊಬ್ಬ ನರ್ಸ್‌ಗೆ ಸೆಲ್ಯೂಟ್ ಎಂದು ನೆಟಿಜನ್ಸ್ ಹೇಳಿದ್ದಾರೆ.

— Fatma Şahin (@FatmaSahin) February 11, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...