
ವಿಪತ್ತಿನ ಸಂದರ್ಭದಲ್ಲಿ ತಮ್ಮ ಜೀವ ಉಳಿಸಿಕೊಳ್ಳುವ ಬದಲು ನವಜಾತ ಶಿಶುಗಳ ಜೀವಗಳನ್ನು ಉಳಿಸಲು ಆಯ್ಕೆ ಮಾಡಿದ ಇಬ್ಬರು ದಾದಿಯರ ಕಾರ್ಯ ಭಾರೀ ಮೆಚ್ಚುಗೆ ಗಳಿಸಿದೆ.
ಭೂಕಂಪ ಸಂಭವಿಸಿದಾಗ ತೀವ್ರ ನಿಗಾ ಘಟಕದಲ್ಲಿ (ICU) ಶಿಶುಗಳನ್ನು ಇರಿಸಲಾಗಿದ್ದ ಕೋಣೆಗೆ ಡೆವ್ಲೆಟ್ ನಿಜಾಮ್ ಮತ್ತು ಗಜ್ವಾಲ್ ಕಾಲಿಕ್ಸನ್ ಎಂದು ಗುರುತಿಸಲಾದ ಇಬ್ಬರು ನರ್ಸ್‌ಗಳು ಓಡುತ್ತಿರುವುದನ್ನು ಗಾಜಿಯಾಂಟೆಪ್‌ನ ಆಸ್ಪತ್ರೆಯ ಸಿಸಿ ಕ್ಯಾಮೆರಾ ವೀಡಿಯೊ ಕ್ಲಿಪ್ ತೋರಿಸುತ್ತದೆ.
ಹೆಚ್ಚಿನ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಹೊರಾಂಗಣಕ್ಕೆ ಓಡುತ್ತಿದ್ದರೆ, ಇಬ್ಬರು ದಾದಿಯರು ಬಂದು ಮಕ್ಕಳು ಕೆಳಗೆ ಬೀಳದಂತೆ ತಡೆಯಲು ಇನ್ಕ್ಯುಬೇಟರ್‌ಗಳ ಬಳಿ ನಿಂತರು. ಭೂಕಂಪದ ಉದ್ದಕ್ಕೂ, ಕೋಣೆಯೊಳಗೆ ಎಲ್ಲವೂ ಅಲುಗಾಡುತ್ತಿರುವಾಗ, ಧೈರ್ಯಶಾಲಿ ದಾದಿಯರು ತಮ್ಮ ಜೀವ ಮರೆತು ಶಿಶುಗಳನ್ನು ರಕ್ಷಿಸಿದರು.
ಅವರ ಈ ಸಾಹಸ ಕಾರ್ಯಕ್ಕೆ ಈಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ನವಜಾತ ಶಿಶುಗಳನ್ನು ರಕ್ಷಿಸುವ ಪ್ರತಿಯೊಬ್ಬ ನರ್ಸ್‌ಗೆ ಸೆಲ್ಯೂಟ್ ಎಂದು ನೆಟಿಜನ್ಸ್ ಹೇಳಿದ್ದಾರೆ.