ಆಂಧ್ರಪ್ರದೇಶದ ಪೂರ್ವ ಗೋದಾವರಿಯ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳು ಮದುವೆಯಾಗಿದ್ದಾರೆ.
ಕಾಲೇಜ್ ಕೊಠಡಿಯಲ್ಲೇ ವಿದ್ಯಾರ್ಥಿಯೊಬ್ಬ ಸಹಪಾಠಿಗೆ ತಾಳಿಕಟ್ಟಿದ ಘಟನೆ ಕಳೆದ ತಿಂಗಳು 17 ರಂದು ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಘಟನೆ ನಂತರ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ತಮಾಷೆಗಾಗಿ ಮದುವೆಯಾಗಿದ್ದಾರೆಯೇ ಅಥವಾ ಸೀರಿಯಸ್ಸಾಗಿ ಹುಡುಗ ತಾಳಿ ಕಟ್ಟಿದ್ದಾನೆಯೇ ಎನ್ನುವುದು ಗೊತ್ತಾಗಿಲ್ಲ. ಕಾಲೇಜಿನಲ್ಲಿ ಇಂತಹ ಕೃತ್ಯವೆಸಗಿದ ಕಾರಣಕ್ಕೆ ಪ್ರಾಂಶುಪಾಲರು ಇಬ್ಬರಿಗೂ ಟಿಸಿ ಕೊಟ್ಟು ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.