ಒಮಿಕ್ರಾನ್ ರೂಪಾಂತರಿಯ ಮೊದಲ ಘಟನೆಯನ್ನು ಕಳೆದ ವಾರವಷ್ಟೇ ಪತ್ತೆ ಮಾಡಿದ ಇಸ್ರೇಲ್‌ನಲ್ಲಿ ಇಬ್ಬರು ವೈದ್ಯರು ಈ ಹೊಸ ಅವತಾರಿ ವೈರಾಣುವಿನ ಸೋಂಕಿಗೆ ಈಡಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಇಬ್ಬರು ವೈದ್ಯರು ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದು, ಬೂಸ್ಟರ್ ಶಾಟ್ ಹಾಕಿಸಿಕೊಂಡಿದ್ದರೂ ಸಹ ಒಮಿಕ್ರಾನ್ ದಾಳಿಗೆ ಒಳಗಾಗಿದ್ದಾರೆ. ಇಬ್ಬರೂ ವೈದ್ಯರು ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರಲ್ಲಿ ಒಬ್ಬರು ಲಂಡನ್‌ಗೆ ಭೇಟಿ ನೀಡಿದ್ದರು. ವಿಮಾನವೇರಿದ್ದಾಗ ನೆಗೆಟಿವ್ ಎಂದು ಕಂಡು ಬಂದ ಈ ವೈದ್ಯರಿಗೆ ಕೆಲ ದಿನಗಳ ಬಳಿಕ ರೋಗ ಲಕ್ಷಣಗಳು ಪತ್ತೆಯಾಗಿವೆ.
ಅದಾಗಲೇ ಒಮಿಕ್ರಾನ್‌ನ ನಾಲ್ಕು ಪ್ರಕರಣಗಳು ವರದಿಯಾಗಿರುವ ಇಸ್ರೇಲ್‌ನಲ್ಲಿ 10 ಮಂದಿಯನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ.
ಕೋವಿಡ್‌ನ ಹೊಸ ವೈರಾಣು ವಿರುದ್ಧ ಹೋರಾಟಕ್ಕೆ ನಿಂತಿರುವ ಇಸ್ರೇಲ್ ತನ್ನೆಲ್ಲಾ ಗಡಿಗಳನ್ನು ವಿದೇಶೀಯರಿಗೆ ಮುಚ್ಚಿದ್ದರೂ ಸಹ ಈ ಪ್ರಕರಣಗಳು ದಾಖಲಾಗಿವೆ.