alex Certify BREAKING: ಹಳಿ ತಪ್ಪಿದ ಇಂದೋರ್​ – ದೌಂಡ್​ ವಿಶೇಷ ರೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಹಳಿ ತಪ್ಪಿದ ಇಂದೋರ್​ – ದೌಂಡ್​ ವಿಶೇಷ ರೈಲು

ಇಂದೋರ್​ – ದೌಂಡ್​ ವಿಶೇಷ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲಾ ಹಿಲ್​​ ಟೌನ್​​ನ ಫ್ಲಾಟ್​ಫಾರಂ ಬಳಿ ಸಂಭವಿಸಿದೆ.

ಘಟನೆ ಸಂಬಂಧ ಇಲ್ಲಿಯವರೆಗೆ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಮುಂಬೈನಿಂದ 80 ಕಿಮೀ ದೂರದಲ್ಲಿರುವ ಲೋನಾವಾಲಾ ನಿಲ್ದಾಣದ ಫ್ಲಾಟ್​ಫಾರಂ ಪ್ರವೇಶಿಸುತ್ತಿದ್ದ ವೇಳೆ ರೈಲಿನ ಹಿಂಭಾಗದ 2 ಬೋಗಿಗಳು ಹಳಿ ತಪ್ಪಿವೆ ಎನ್ನಲಾಗಿದೆ. ಬೆಳಗ್ಗೆ ಸುಮಾರು 7:50ರ ಸುಮಾರಿಗೆ ಈ ಘಟನೆ ಸಂಭವಿಸಿದೆ.

ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾರಿಗೂ ಕೂಡ ಯಾವುದೇ ರೀತಿಯ ಗಾಯ ಸಂಭವಿಸಿಲ್ಲ ಎಂದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿ ಶಿವಾಜಿ ಸುತಾರ್ ಮಾಹಿತಿ ನೀಡಿದ್ದಾರೆ. ಮಧ್ಯ ಪ್ರದೇಶದ ಇಂದೋರ್​ನಿಂದ ಪುಣೆ ಜಿಲ್ಲೆಯ ದೌಂಡ್​ಗೆ ಈ ರೈಲು ಹೊರಟಿತ್ತು. ರಕ್ಷಣಾ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿಕೊಡಲಿದೆ ಎಂದು ಸುತಾರ್​ ಮಾಹಿತಿ ನೀಡಿದ್ರು. ಹಳಿ ತಪ್ಪಿದ 2 ಬೋಗಿಗಳನ್ನು ಬೇರ್ಪಡಿಸಿದ ಬಳಿಕ ರೈಲು 9:27ರಿಂದ ಪ್ರಯಾಣ ಮುಂದುವರಿಸಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...