ಇಂದೋರ್ – ದೌಂಡ್ ವಿಶೇಷ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಲೋನಾವಾಲಾ ಹಿಲ್ ಟೌನ್ನ ಫ್ಲಾಟ್ಫಾರಂ ಬಳಿ ಸಂಭವಿಸಿದೆ.
ಘಟನೆ ಸಂಬಂಧ ಇಲ್ಲಿಯವರೆಗೆ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಮುಂಬೈನಿಂದ 80 ಕಿಮೀ ದೂರದಲ್ಲಿರುವ ಲೋನಾವಾಲಾ ನಿಲ್ದಾಣದ ಫ್ಲಾಟ್ಫಾರಂ ಪ್ರವೇಶಿಸುತ್ತಿದ್ದ ವೇಳೆ ರೈಲಿನ ಹಿಂಭಾಗದ 2 ಬೋಗಿಗಳು ಹಳಿ ತಪ್ಪಿವೆ ಎನ್ನಲಾಗಿದೆ. ಬೆಳಗ್ಗೆ ಸುಮಾರು 7:50ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾರಿಗೂ ಕೂಡ ಯಾವುದೇ ರೀತಿಯ ಗಾಯ ಸಂಭವಿಸಿಲ್ಲ ಎಂದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿ ಶಿವಾಜಿ ಸುತಾರ್ ಮಾಹಿತಿ ನೀಡಿದ್ದಾರೆ. ಮಧ್ಯ ಪ್ರದೇಶದ ಇಂದೋರ್ನಿಂದ ಪುಣೆ ಜಿಲ್ಲೆಯ ದೌಂಡ್ಗೆ ಈ ರೈಲು ಹೊರಟಿತ್ತು. ರಕ್ಷಣಾ ವಾಹನಗಳನ್ನು ಸ್ಥಳಕ್ಕೆ ಕಳುಹಿಸಿಕೊಡಲಿದೆ ಎಂದು ಸುತಾರ್ ಮಾಹಿತಿ ನೀಡಿದ್ರು. ಹಳಿ ತಪ್ಪಿದ 2 ಬೋಗಿಗಳನ್ನು ಬೇರ್ಪಡಿಸಿದ ಬಳಿಕ ರೈಲು 9:27ರಿಂದ ಪ್ರಯಾಣ ಮುಂದುವರಿಸಿತು.