alex Certify ನಾಯಿಯನ್ನು ಬಡಿದು ಸಾಯಿಸಿದ ಇಬ್ಬರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಯನ್ನು ಬಡಿದು ಸಾಯಿಸಿದ ಇಬ್ಬರು ಅರೆಸ್ಟ್

ನಾಯಿಯೊಂದನ್ನು ಕೋಲುಗಳಿಂದ ಬಡಿದು ಸಾಯಿಸಿದ ಮೂವರು ವ್ಯಕ್ತಿಗಳ ವಿಡಿಯೋ ವೈರಲ್ ಆದ ಬಳಿಕ ಅಖಾಡಕ್ಕಿಳಿದ ಪೊಲೀಸರು ಅವರನ್ನು ಬಂಧಿಸಿದ ಘಟನೆ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯಲ್ಲಿ ನಡೆದಿದೆ.

ಸ್ವಲ್ಪ ದೂರದಿಂದ ಸೆರೆ ಹಿಡಿಯಲಾದ ಈ ವಿಡಿಯೋದಲ್ಲಿ, ಅಸಹಾಯಕತೆಯಿಂದ ಕೂಗಿಕೊಳ್ಳುತ್ತಿರುವ ನಾಯಿಯೊಂದಕ್ಕೆ ಇವರು ಹಲ್ಲೆ ಮಾಡುತ್ತಿರುವುದನ್ನು ನೋಡಬಹುದಾಗಿದ್ದು, ಕೊನೆಯಲ್ಲಿ ಸ್ತಬ್ಧವಾದ ನಾಯಿಯ ದೇಹವನ್ನು ನೆಲದ ಮೇಲೆ ಎಳೆದಾಡಿಕೊಂಡು ಹೋಗಿ ಬಿಸಾಡಿದ್ದಾರೆ.

ಸ್ನೇಹಿತರು ನೀಡಿದ ಉಡುಗೊರೆ ಕಂಡು ಬಿದ್ದು ಬಿದ್ದು ನಕ್ಕ ವಧು – ವರ..!

ಈ ನಾಯಿಯು ಸುಂದರಂ ಎಂಬ ವ್ಯಕ್ತಿ ಸಾಕುತ್ತಿದ್ದ ಮೇಕೆಗಳ ಮೇಲೆ ಪದೇ ಪದೇ ದಾಳಿ ಮಾಡಿ ಕಚ್ಚುತ್ತಿದ್ದ ಕಾರಣದಿಂದ ಅದರ ಮೇಲೆ ಕೋಪಗೊಂಡ ಸುಂದರಂ ಹಾಗೂ ಸಂಗಡಿಗರು, ಪ್ರತೀಕಾರದಿಂದ ಈ ಕೆಲಸಕ್ಕೆ ಮುಂದಾಗಿದ್ದಾರೆ.

ತೂತ್ತುಕುಡಿಯ ಶಾಂತಕುಳಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

ಸುಂದರಂ ಹಾಗೂ ಆತನ ಸಹಚರ ದಾಸ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ಮೂರನೇಯಾತನಿಗೆ ಹುಡುಕಾಟದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...