alex Certify 16 ತಿಂಗಳ ಅವಧಿಯಲ್ಲಿ 10 ಮಿಲಿಯನ್​​​ ಬಳಕೆದಾರರನ್ನು ಸಂಪಾದಿಸಿದ ‘ಕೂ’ ಆಪ್…​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

16 ತಿಂಗಳ ಅವಧಿಯಲ್ಲಿ 10 ಮಿಲಿಯನ್​​​ ಬಳಕೆದಾರರನ್ನು ಸಂಪಾದಿಸಿದ ‘ಕೂ’ ಆಪ್…​..!

ಟ್ವಿಟರ್​ಗೆ ಪರ್ಯಾಯವಾಗಿ ನಿರ್ಮಾಣವಾದ ಸ್ವದೇಶಿ ನಿರ್ಮಿತ ʼಕೂʼ ಅಪ್ಲಿಕೇಶನ್​ 10 ಮಿಲಿಯನ್​ ಚಂದಾದಾರರನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ಕೂ ಅಪ್ಲಿಕೇಶನ್​ ಬಳಕೆಗೆ 16 ತಿಂಗಳ ಅವಧಿ ಕಳೆದಿದೆ. ಇದು ಕೂಡ ಟ್ವಿಟರ್​ನಂತೆ ಕೆಲಸ ಮಾಡುವ ಸಾಮಾಜಿಕ ಮಾಧ್ಯಮದ ವೇದಿಕೆಯಾಗಿದ್ದು ಇದರಲ್ಲಿ ಇಂಗ್ಲೀಷ್​, ಹಿಂದಿ, ಕನ್ನಡ ಸೇರಿಂತೆ 7 ಭಾರತೀಯ ಭಾಷೆಯಲ್ಲಿ ಸಂವಹನ ನಡೆಸಬಹುದಾಗಿದೆ. ಮೋದಿ ಸರ್ಕಾರದ ಜೊತೆ ಟ್ವಿಟರ್​ ಇಂಡಿಯಾ ಜಟಾಪಟಿ ಮುಂದುವರಿದ ಬೆನ್ನಲ್ಲೇ ಫೆಬ್ರವರಿ ತಿಂಗಳಿನಂದ 85 ಪ್ರತಿಶತಕ್ಕೂ ಅಧಿಕ ಮಂದಿ ಕೂ ಅಪ್ಲಿಕೇಶನ್​ನತ್ತ ವಾಲುತ್ತಿದ್ದಾರೆ.

ಸರ್ಕಾರಿ ಸಚಿವರು, ವಿರೋಧ ಪಕ್ಷದ ನಾಯಕರು, ಕ್ರಿಕೆಟ್​ ಆಟಗಾರರು ಹಾಗೂ ಬಾಲಿವುಡ್​ ಸೆಲೆಬ್ರಿಟಿಗಳು ಸೇರಿದಂತೆ ಘಟಾನುಘಟಿಗಳೇ ಭಾರತೀಯ ಭಾಷೆಗಳಲ್ಲಿ ಕೂ ಅಪ್ಲಿಕೇಶನ್​ ಬಳಕೆ ಮಾಡುತ್ತಿದ್ದಾರೆ.

ಟ್ವಿಟರ್​ ಹಾಗೂ ಸರ್ಕಾರದ ನಡುವೆ ಕಿತ್ತಾಟ ನಡೆಯುತ್ತಿದ್ದ ನಡುವೆಯೇ ನಮ್ಮ ಅಪ್ಲಿಕೇಶನ್​ ಬೆಳಕಿಗೆ ಬಂದಿದೆ. ಜನರಿಗೂ ತಾಯ್ನಾಡು ಭಾಷೆಯಲ್ಲಿಯೇ ಸಂವಹನ ನಡೆಸಲು ಈ ಸಾಮಾಜಿಕ ಮಾಧ್ಯಮ ವೇದಿಕೆ ಸೂಕ್ತ ಎಂದು ಎನಿಸಲು ಆರಂಭಿಸಿದೆ ಎಂದು ಕೂ ಸಹ ಸಂಸ್ಥಾಪಕ ಹಾಗೂ ಸಿಇಓ ಅಪ್ರಮೇಯ ರಾಧಾಕೃಷ್ಣನ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...