alex Certify ಟ್ವಿಟರ್​ನಲ್ಲಿ ಮಹಿಳೆಯರಿಗೆ ಕೊಕ್​: ವೈರಲ್​ ಫೋಟೋಗೆ ಭಾರಿ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್​ನಲ್ಲಿ ಮಹಿಳೆಯರಿಗೆ ಕೊಕ್​: ವೈರಲ್​ ಫೋಟೋಗೆ ಭಾರಿ ಆಕ್ರೋಶ

ಉದ್ಯಮಿ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ವಹಿಸಿಕೊಂಡಾಗಿನಿಂದ, ಒಂದಿಲ್ಲೊಂದು ವಿಷಯ ಸುದ್ದಿಯಾಗುತ್ತಲೇ ಇದೆ. ಸಹಸ್ರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಮೇಲೆ ಮಸ್ಕ್​ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವುದಂತೂ ನಿಜ. ಇದೀಗ ಮಸ್ಕ್​ ಬರುವುದಕ್ಕೆ ಮುನ್ನ ಹಾಗೂ ಬಂದ ಮೇಲೆ ಏನಾಗಿದೆ ಸ್ಥಿತಿ ಎಂಬ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೊದಲು ಮತ್ತು ನಂತರ ಎಂಬ ಶೀರ್ಷಿಕೆ ಜತೆ ಈ ಫೋಟೋ ವೈರಲ್​ ಆಗಿದೆ. ಮೊದಲ ಫೋಟೋದಲ್ಲಿ ಅಸಂಖ್ಯ ಮಹಿಳೆಯರು ಟ್ವಿಟರ್​ನಲ್ಲಿ ಉದ್ಯೋಗ ಪಡೆದುಕೊಂಡಿದ್ದರು. ಆದರೆ ನಂತರ ಎಂದಿರುವ ಫೋಟೋ, ಮಸ್ಕ್​ ಅಧಿಕಾರ ಸ್ವೀಕರಿಸಿದ ಮೇಲೆ ಕ್ಲಿಕ್​ ಮಾಡಲಾಗಿದ್ದು, ಅಲ್ಲಿ ಮಹಿಳಾ ಉದ್ಯೋಗಿಗಳೇ ಕಾಣಿಸುತ್ತಿಲ್ಲ!

ಮಸ್ಕ್​ ಈ ಕ್ರಮಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ ಕೇಳಿಬಂದಿದೆ. ಕೆನಡಾದ ಪತ್ರಕರ್ತೆ ಲಾರಾ ಚೆನ್ ಈ ಎರಡೂ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಮಹಿಳೆಯರ ಮೇಲೆ ಆಗುತ್ತಿರುವ ಅನ್ಯಾಯದ ಕುರಿತು ಸೂಚ್ಯವಾಗಿ ತಿಳಿಸಿದ್ದಾರೆ.

ಲಿಂಗ ತಾರತಮ್ಯತೆ ಎಂಥ ದೊಡ್ಡ ಉದ್ಯೋಗವನ್ನೂ ಬಿಟ್ಟಿಲ್ಲ ಎಂದು ಇದಕ್ಕೆ ಸಹಸ್ರಾರು ಮಂದಿ ಕಮೆಂಟ್​ ಹಾಕಿದ್ದಾರೆ. ಆದರೆ ಇದಕ್ಕೆ ಮಸ್ಕ್​ ನೀಡಿರುವ ಕಾರಣವೇ ಬೇರೆ. ಕೋಡಿಂಗ್​ ಮಾಡುವುದು ಟ್ವಿಟರ್​ನ ಬಹುದೊಡ್ಡ ಕೆಲಸ. ಆದರೆ ಹೆಚ್ಚಿನ ಮಹಿಳಾ ಉದ್ಯೋಗಿಗಳಿಗೆ ಇದರ ಅರಿವು ಇಲ್ಲದ ಕಾರಣ, ಕೆಲಸದಿಂದ ತೆಗೆದುಹಾಕಲಾಗಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...