ಉದ್ಯಮಿ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ವಹಿಸಿಕೊಂಡಾಗಿನಿಂದ, ಒಂದಿಲ್ಲೊಂದು ವಿಷಯ ಸುದ್ದಿಯಾಗುತ್ತಲೇ ಇದೆ. ಸಹಸ್ರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಮೇಲೆ ಮಸ್ಕ್ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವುದಂತೂ ನಿಜ. ಇದೀಗ ಮಸ್ಕ್ ಬರುವುದಕ್ಕೆ ಮುನ್ನ ಹಾಗೂ ಬಂದ ಮೇಲೆ ಏನಾಗಿದೆ ಸ್ಥಿತಿ ಎಂಬ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೊದಲು ಮತ್ತು ನಂತರ ಎಂಬ ಶೀರ್ಷಿಕೆ ಜತೆ ಈ ಫೋಟೋ ವೈರಲ್ ಆಗಿದೆ. ಮೊದಲ ಫೋಟೋದಲ್ಲಿ ಅಸಂಖ್ಯ ಮಹಿಳೆಯರು ಟ್ವಿಟರ್ನಲ್ಲಿ ಉದ್ಯೋಗ ಪಡೆದುಕೊಂಡಿದ್ದರು. ಆದರೆ ನಂತರ ಎಂದಿರುವ ಫೋಟೋ, ಮಸ್ಕ್ ಅಧಿಕಾರ ಸ್ವೀಕರಿಸಿದ ಮೇಲೆ ಕ್ಲಿಕ್ ಮಾಡಲಾಗಿದ್ದು, ಅಲ್ಲಿ ಮಹಿಳಾ ಉದ್ಯೋಗಿಗಳೇ ಕಾಣಿಸುತ್ತಿಲ್ಲ!
ಮಸ್ಕ್ ಈ ಕ್ರಮಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ ಕೇಳಿಬಂದಿದೆ. ಕೆನಡಾದ ಪತ್ರಕರ್ತೆ ಲಾರಾ ಚೆನ್ ಈ ಎರಡೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಮಹಿಳೆಯರ ಮೇಲೆ ಆಗುತ್ತಿರುವ ಅನ್ಯಾಯದ ಕುರಿತು ಸೂಚ್ಯವಾಗಿ ತಿಳಿಸಿದ್ದಾರೆ.
ಲಿಂಗ ತಾರತಮ್ಯತೆ ಎಂಥ ದೊಡ್ಡ ಉದ್ಯೋಗವನ್ನೂ ಬಿಟ್ಟಿಲ್ಲ ಎಂದು ಇದಕ್ಕೆ ಸಹಸ್ರಾರು ಮಂದಿ ಕಮೆಂಟ್ ಹಾಕಿದ್ದಾರೆ. ಆದರೆ ಇದಕ್ಕೆ ಮಸ್ಕ್ ನೀಡಿರುವ ಕಾರಣವೇ ಬೇರೆ. ಕೋಡಿಂಗ್ ಮಾಡುವುದು ಟ್ವಿಟರ್ನ ಬಹುದೊಡ್ಡ ಕೆಲಸ. ಆದರೆ ಹೆಚ್ಚಿನ ಮಹಿಳಾ ಉದ್ಯೋಗಿಗಳಿಗೆ ಇದರ ಅರಿವು ಇಲ್ಲದ ಕಾರಣ, ಕೆಲಸದಿಂದ ತೆಗೆದುಹಾಕಲಾಗಿದೆ ಎಂದಿದ್ದಾರೆ.
https://twitter.com/Frida_Kahlua/status/1594480865127661568?ref_src=twsrc%5Etfw%7Ctwcamp%5Etweetembed%7Ctwterm%5E15