alex Certify ಬೆಳ್ಳಂಬೆಳಗ್ಗೆ ತಾಂತ್ರಿಕ ದೋಷ ಎದುರಿಸಿದ ಟ್ವಿಟರ್..! ಲಾಗಿನ್​ ಮಾಡಲು ಟ್ವೀಟಿಗರ ಹರಸಾಹಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳ್ಳಂಬೆಳಗ್ಗೆ ತಾಂತ್ರಿಕ ದೋಷ ಎದುರಿಸಿದ ಟ್ವಿಟರ್..! ಲಾಗಿನ್​ ಮಾಡಲು ಟ್ವೀಟಿಗರ ಹರಸಾಹಸ

ಟ್ವಿಟರ್​ನ ಅನೇಕ ಬಳಕೆದಾರರಿಗೆ ಗುರುವಾರ ಸರ್ವರ್ ಡೌನ್​ ಆದ ಅನುಭವವಾಗಿದೆ. ಸೋಶಿಯಲ್​ ಮೀಡಿಯಾದ ವೆಬ್​ಸೈಟ್​ನಲ್ಲಿ ಅನೇಕ ಟ್ವೀಟಿಗರು ಈ ಬಗ್ಗೆ ವರದಿ ಮಾಡಿದ್ದಾರೆ ಎಂದು ವೆಬ್​ಸೈಟ್​ ಡೌನ್​​ಡಿಟೆಕ್ಟರ್​ ಮಾಹಿತಿ ನೀಡಿದೆ.

ಈ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸುತ್ತಿರೋದಾಗಿ ಟ್ವಿಟರ್​ ಸಂಸ್ಥೆ ಮಾಹಿತಿ ನೀಡಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 7:10ರ ಸುಮಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು 6000ಕ್ಕೂ ಅಧಿಕ ಟ್ವೀಟ್​ ಬಳಕೆದಾರರು ಈ ಬಗ್ಗೆ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಒಂದು ಗಂಟೆಯ ಒಳಗಾಗಿ ಈ ರೀತಿ ವರದಿ ಸಲ್ಲಿಸಿದವರ ಸಂಖ್ಯೆ 2600ಕ್ಕೆ ಇಳಿಕೆಯಾಗಿದೆ ಎಂದು ವೆಬ್​ಸೈಟ್​ ಡೌನ್​ ಡಿಟೆಕ್ಟರ್​ ಮಾಹಿತಿ ನೀಡಿದೆ.

ಟ್ವಿಟರ್​ ಬಳಕೆ ಮಾಡುವ ವೇಳೆ ಟ್ವೀಟಿಗರು ಲಾಗಿನ್ ಸಮಸ್ಯೆಯನ್ನ ಎದುರಿಸಿದ್ದಾರೆ. ತಾಂತ್ರಿಕ ದೋಷವನ್ನ ಒಪ್ಪಿಕೊಂಡ ಟ್ವಿಟರ್​ ಸಂಸ್ಥೆ, ನಿಮ್ಮ ವೆಬ್​ನಲ್ಲಿ ಪ್ರೊಫೈಲ್​ ಟ್ವೀಟ್​ಗಳು ಲೋಡ್​ ಆಗಿರಲಿಕ್ಕಿಲ್ಲ. ಈ ಸಮಸ್ಯೆಯನ್ನ ಸರಿಪಡಿಸಿಲು ನಾವು ಯತ್ನಿಸುತ್ತಿದ್ದೇವೆ ಎಂದು ಹೇಳಿದೆ.

ಕೆಲವೇ ನಿಮಿಷಗಳಲ್ಲಿ ಇನ್ನೊಂಧು ಟ್ವೀಟ್​ ಮಾಡಿದ ಟ್ವಿಟರ್​ ಸಂಸ್ಥೆ, ಈಗ ನಿಮ್ಮ ಪ್ರೊಫೈಲ್​ನಲ್ಲಿ ಟ್ವೀಟ್​ಗಳು ಸಿಗಲಿದೆ. ಆದರೆ ಉಳಿದ ವಿಭಾಗಗಳು ನಿಮಗೆ ಕಾಣಿಸಲಿಕ್ಕಿಲ್ಲ. ಈ ಸಮಸ್ಯೆಯನ್ನೂ ಸರಿ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...