ಅಂತರ್ಜಾಲವು ಸಾವಿರಾರು ಭಕ್ಷ್ಯಗಳು ಹಾಗೂ ಪಾಕವಿಧಾನಗಳ ಉಗ್ರಾಣವಾಗಿದೆ. ಹಲವಾರು ಮಂದಿ ಪುಸ್ತಕ ಅಥವಾ ಯೂಟ್ಯೂಬ್ ನೋಡುತ್ತಾ ಅಡುಗೆ ಮಾಡುತ್ತಾರೆ. ಆದರೆ, ಅಷ್ಟೇ ಪರ್ಫೆಕ್ಟ್ ಆಗಿ ಖಾದ್ಯ ತಯಾರಾಗುತ್ತೆ ಅಂತಾ ಹೇಳಲು ಸಾಧ್ಯವಿಲ್ಲ. ಹಾಗೆಯೇ ಇಲ್ಲೊಬ್ಬರು ಕೂಡ ಸೂಪ್ ರೆಸಿಪಿ ಟ್ರೈ ಮಾಡೋಕೆ ಹೋಗಿ ಏನಾಯ್ತು ಗೊತ್ತಾ..?
ಇತ್ತೀಚೆಗೆ, ಟ್ವಿಟರ್ ಬಳಕೆದಾರರು ಬ್ರಿಟಿಷ್ ಆಹಾರ ಬರಹಗಾರ್ತಿ ಮತ್ತು ಅಡುಗೆ ಪುಸ್ತಕ ಲೇಖಕಿ ನಿಗೆಲ್ಲಾ ಲಾಸನ್ ಅವರ ಸೂಪ್ ರೆಸಿಪಿಯನ್ನು ಪ್ರಯತ್ನಿಸಿದ್ದಾರೆ. ಫಲಿತಾಂಶವು ತಮಾಷೆಯ ಮತ್ತು ದೋಷಪೂರಿತವಾಗಿದ್ದು, ಬಳಕೆದಾರರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಬಳಕೆದಾರರು ಹಂಚಿಕೊಂಡ ಫೋಟೋದಲ್ಲಿ, ನಾವು ಮಿಕ್ಸರ್ ಬ್ಲೆಂಡರ್ ಅನ್ನು ನೋಡಬಹುದು. ಮಿಕ್ಸಿ ಜಾರ್ ನಲ್ಲಿ ಅಂಟಿದಂತಾಗಿದೆ. ಅಲ್ಲದೆ ಅಡುಗೆಮನೆಯಲ್ಲಿ ಸಂಪೂರ್ಣ ಅವ್ಯವಸ್ಥೆಯನ್ನುಂಟು ಮಾಡಿದೆ. ಬ್ಲೆಂಡರ್‌ನ ಮುಚ್ಚಳವು ಎಲ್ಲಿಯೂ ಕಾಣಿಸಿಲ್ಲ ಮತ್ತು ಮಾಡಿದ ಪ್ಯೂರಿ ಹತ್ತಿರದ ಚಾವಣಿಯವರೆಗೆ ಚದುರಿಹೋಗಿತ್ತು.!
ಬಳಕೆದಾರರು ಮಾಡಲು ಪ್ರಯತ್ನಿಸುತ್ತಿದ್ದ ಖಾದ್ಯವೆಂದರೆ ಕ್ಯಾರೆಟ್ ಕೊತ್ತಂಬರಿ ಸೂಪ್, ಇದರ ಪಾಕವಿಧಾನವನ್ನು ನಿಗೆಲ್ಲಾ ಲಾಸನ್ ಹಂಚಿಕೊಂಡಿದ್ದಾರೆ. ಇಂದು ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ತಯಾರಿಸಲು ಹೋಗಿದ್ದೆ. ಸ್ವಲ್ಪ ದೋಷವುಂಟಾಯಿತು. ಆದರೆ ಮಾಡಿದ ಪಾಕದ ರುಚಿ ಮಾತ್ರ ಅದ್ಭುತವಾಗಿತ್ತು ಅಂತಾ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ತಾವು ಕೂಡ ಅಡುಗೆ ಮಾಡುವಾಗ ಅಂತಹ ಹಲವು ಘಟನೆಗಳನ್ನು ಎದುರಿಸಿದ್ದಾಗಿ ಹೇಳಿದ್ದಾರೆ.