alex Certify ಧೋನಿ ಖಾತೆಯಿಂದ ‘ಬ್ಲೂ ಬ್ಯಾಡ್ಜ್​’ ಅಳಿಸಿದ ಟ್ವಿಟರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ಖಾತೆಯಿಂದ ‘ಬ್ಲೂ ಬ್ಯಾಡ್ಜ್​’ ಅಳಿಸಿದ ಟ್ವಿಟರ್…!

ಪದೇ ಪದೇ ಒಂದಿಲ್ಲೊಂದು ಕಿರಿಕ್​ ಮೂಲಕವೇ ಸುದ್ದಿಯಾಗುತ್ತಿರುವ ಟ್ವಿಟರ್​ ಇಂಡಿಯಾ ಈ ಬಾರಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಯ ಅಧಿಕೃತ ಟ್ವಿಟರ್​ ಖಾತೆಯಿಂದ ಬ್ಲೂ ಟಿಕ್​ನ್ನು ಅಳಿಸಿ ಹಾಕಿದೆ.

ಮಹೇಂದ್ರ ಸಿಂಗ್​ ಧೋನಿ ಕೊನೆಯ ಬಾರಿಗೆ ಜನವರಿ 8ನೇ ತಾರೀಖಿನಂದು ಟ್ವೀಟಾಯಿಸಿದ್ದರು.

ಧೋನಿ ಖಾತೆಯಿಂದ ಬ್ಲೂ ಮಾರ್ಕ್​ನ್ನು ಅಳಿಸಿರುವ ಬಗ್ಗೆ ಟ್ವಿಟರ್​ ಕಂಪನಿಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಹೊರಬಿದ್ದಿಲ್ಲ.

ಟ್ವಿಟರ್​ನಲ್ಲಿ ಸೆಲೆಬ್ರಿಟಿಗಳ ಅಧಿಕೃತ ಖಾತೆ ಎಂದು ಹೇಳಲು ಸಂಸ್ಥೆಯು ನೀಲಿ ಬಣ್ಣದ ಬ್ಯಾಡ್ಜ್​ನ್ನು ನೀಡುತ್ತದೆ. ನೀಲಿ ಬ್ಯಾಡ್ಜ್​​ ಪಡೆದ ಖಾತೆಯು ಅಧಿಕೃತವಾಗಿರುತ್ತದೆ. ಹಾಗೂ ಅದು ಎಂದೂ ಸಕ್ರಿಯವಾಗಿ ಇರಬೇಕು.

ಕಳೆದ ವರ್ಷ ಆಗಸ್ಟ್​ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿರುವ ಧೋನಿ, ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಕಾಣಿಸಿಕೊಳ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...