alex Certify ಅಫ್ಘಾನಿಸ್ತಾನ ಸಚಿವಾಲಯಗಳ ನೀಲಿ ಬ್ಯಾಡ್ಜ್​ ಅಳಿಸಿ ಹಾಕಿದ ಟ್ವಿಟರ್​ ಸಂಸ್ಥೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಫ್ಘಾನಿಸ್ತಾನ ಸಚಿವಾಲಯಗಳ ನೀಲಿ ಬ್ಯಾಡ್ಜ್​ ಅಳಿಸಿ ಹಾಕಿದ ಟ್ವಿಟರ್​ ಸಂಸ್ಥೆ..!

ಅಮೆರಿಕದ ಮೈಕ್ರೋಬ್ಲಾಗಿಂಗ್​ ವೇದಿಕೆ ಟ್ವಿಟರ್​​ ಅಫ್ಘಾನಿಸ್ತಾನ ಸರ್ಕಾರ ಸಚಿವಾಲಯಗಳ ಟ್ವಿಟರ್​ ಖಾತೆಗೆ ಈ ಹಿಂದೆ ನೀಡಿದ್ದ ನೀಲಿ ಬಣ್ಣದ ಬ್ಯಾಡ್ಜ್​​ಗಳನ್ನು ಅಳಿಸಿ ಹಾಕಿದೆ ಎಂದು ಸ್ಥಳೀಯ ಮಾಧ್ಯಮಗಳು ಮಾಹಿತಿ ನೀಡಿವೆ.

ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ, ಆಂತರಿಕ ಸಚಿವಾಲಯ, ಅಧ್ಯಕ್ಷೀಯ ಅರಮನೆ ಹಾಗೂ ರಾಷ್ಟ್ರೀಯ ಸಂಗ್ರಹಣಾ ಪ್ರಾಧಿಕಾರದ ಟ್ವಿಟರ್​ ಖಾತೆಗಳಿಂದ ನೀಲಿ ಬಣ್ಣದ ಪರಿಶೀಲನಾ ಬ್ಯಾಡ್ಜ್​ಗಳನ್ನು ಟ್ವಿಟರ್​ ತೆಗೆದು ಹಾಕಿದೆ.

ಅಮೆರಿಕ ಬೆಂಬಲಿತ ಅಫ್ಘಾನ್​ ಸರ್ಕಾರವನ್ನು ಕೆಡವಿದ್ದ ಅಪ್ಘನ್​ ಉಗ್ರರು ತಮ್ಮದೇ ಆದ ಪಾರುಪತ್ಯವನ್ನು ಸ್ಥಾಪಿಸಿದ್ದರು. ಇದೀಗ ಅಪ್ಘನ್​​ನಲ್ಲಿ ತಾಲಿಬಾನ್​ ಸರ್ಕಾರ ಕೂಡ ರಚನೆಯಾಗಿದೆ. ಈ ನಡುವೆ ಟ್ವಿಟರ್ ಈ ಮಹತ್ವದ ಕ್ರಮ ಕೈಗೊಂಡಿದೆ.

ಅಪ್ಘಾನಿಸ್ತಾನದಲ್ಲಿ ಅಶ್ರಫ್​​ ಘನಿ ಸರ್ಕಾರ ಪತನವಾದ ಬಳಿಕ ಈ ಟ್ವಿಟರ್​ ಖಾತೆಗಳಲ್ಲಿ ಯಾವುದೇ ಪೋಸ್ಟ್​ಗಳನ್ನು ಶೇರ್​ ಮಾಡಲಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...