ಅಮೆರಿಕದ ಮೈಕ್ರೋಬ್ಲಾಗಿಂಗ್ ವೇದಿಕೆ ಟ್ವಿಟರ್ ಅಫ್ಘಾನಿಸ್ತಾನ ಸರ್ಕಾರ ಸಚಿವಾಲಯಗಳ ಟ್ವಿಟರ್ ಖಾತೆಗೆ ಈ ಹಿಂದೆ ನೀಡಿದ್ದ ನೀಲಿ ಬಣ್ಣದ ಬ್ಯಾಡ್ಜ್ಗಳನ್ನು ಅಳಿಸಿ ಹಾಕಿದೆ ಎಂದು ಸ್ಥಳೀಯ ಮಾಧ್ಯಮಗಳು ಮಾಹಿತಿ ನೀಡಿವೆ.
ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ, ಆಂತರಿಕ ಸಚಿವಾಲಯ, ಅಧ್ಯಕ್ಷೀಯ ಅರಮನೆ ಹಾಗೂ ರಾಷ್ಟ್ರೀಯ ಸಂಗ್ರಹಣಾ ಪ್ರಾಧಿಕಾರದ ಟ್ವಿಟರ್ ಖಾತೆಗಳಿಂದ ನೀಲಿ ಬಣ್ಣದ ಪರಿಶೀಲನಾ ಬ್ಯಾಡ್ಜ್ಗಳನ್ನು ಟ್ವಿಟರ್ ತೆಗೆದು ಹಾಕಿದೆ.
ಅಮೆರಿಕ ಬೆಂಬಲಿತ ಅಫ್ಘಾನ್ ಸರ್ಕಾರವನ್ನು ಕೆಡವಿದ್ದ ಅಪ್ಘನ್ ಉಗ್ರರು ತಮ್ಮದೇ ಆದ ಪಾರುಪತ್ಯವನ್ನು ಸ್ಥಾಪಿಸಿದ್ದರು. ಇದೀಗ ಅಪ್ಘನ್ನಲ್ಲಿ ತಾಲಿಬಾನ್ ಸರ್ಕಾರ ಕೂಡ ರಚನೆಯಾಗಿದೆ. ಈ ನಡುವೆ ಟ್ವಿಟರ್ ಈ ಮಹತ್ವದ ಕ್ರಮ ಕೈಗೊಂಡಿದೆ.
ಅಪ್ಘಾನಿಸ್ತಾನದಲ್ಲಿ ಅಶ್ರಫ್ ಘನಿ ಸರ್ಕಾರ ಪತನವಾದ ಬಳಿಕ ಈ ಟ್ವಿಟರ್ ಖಾತೆಗಳಲ್ಲಿ ಯಾವುದೇ ಪೋಸ್ಟ್ಗಳನ್ನು ಶೇರ್ ಮಾಡಲಾಗಿಲ್ಲ.