
ಮಂಗಳವಾರದಂದು ಟೆಕ್ ದೈತ್ಯ ಗೂಗಲ್ ಒಡೆತನದ ಜಿ ಮೇಲ್ ಸೇವೆಯಲ್ಲಿ ವ್ಯತ್ಯಯವಾಗಿ ಬಳಿಕ ಸರಿಯಾಗಿತ್ತು.
ಇದೀಗ ಮತ್ತೊಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸರದಿಯಾಗಿದ್ದು, ಇಂದು ಬೆಳಿಗ್ಗೆ ಭಾರತದ ವಿವಿಧೆಡೆ ಟ್ವಿಟ್ಟರ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಆದರೆ ಇದಕ್ಕೆ ಕಾರಣವೇನೆಂಬುದರ ಕುರಿತು ಟ್ವಿಟ್ಟರ್ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಎಲ್ಲ ಬಳಕೆದಾರರಿಗೂ ಈ ಸಮಸ್ಯೆ ಎದುರಾಗಿಲ್ಲವೆಂದು ಹೇಳಲಾಗಿದೆ.
ಟ್ವಿಟ್ಟರ್ ಬಳಕೆದಾರರು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟ್ಟರ್ ವ್ಯತ್ಯಯವಾಗಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ Downdetector ಸಹ ಟ್ವಿಟ್ಟರ್ ಸೇವೆಯಲ್ಲಿ ವ್ಯತ್ಯಯವಾಗಿರುವುದನ್ನು ಖಚಿತಪಡಿಸಿದೆ.