
ಶನಿವಾರ ಬೆಳಗ್ಗೆ ವೆಂಕಯ್ಯ ನಾಯ್ಡು ಅವರ ಅಧಿಕೃತ ಖಾತೆಯಿಂದ ನೀಲಿ ಟಿಕ್ನ್ನು ಅಳಿಸಿ ಹಾಕಿತ್ತು. ಆದರೆ ವೈಸ್ ಪ್ರೆಸಿಡೆಂಟ್ ಆಫ್ ಇಂಡಿಯಾ ಎಂಬ ಕಚೇರಿಯ ಟ್ವಿಟರ್ ಖಾತೆಯಲ್ಲಿ ನೀಲಿ ಬಣ್ಣದ ಟಿಕ್ ಹಾಗೆಯೇ ಉಳಿದಿತ್ತು.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಉಪರಾಷ್ಟ್ರಪತಿ ಕಚೇರಿ ಸಿಬ್ಬಂದಿ, ವೆಂಕಯ್ಯ ನಾಯ್ಡು ಅವರ ಅಧಿಕೃತ ಖಾತೆ ಕಳೆದ ಆರು ತಿಂಗಳಿನಿಂದ ಬಳಕೆಯಲ್ಲಿ ಇರಲಿಲ್ಲ. ಇದೇ ಕಾರಣಕ್ಕೆ ನೀಲಿ ಬಣ್ಣದ ಮಾರ್ಕ್ನ್ನು ತೆಗೆದು ಹಾಕಿದ್ದಿರಬಹುದು ಎಂದು ಹೇಳಿದ್ದರು. ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ಕೊನೆಯ ಬಾರಿಗೆ ಕಳೆದ ವರ್ಷ ಜುಲೈ 23ರಲ್ಲಿ ಟ್ವೀಟ್ ಮಾಡಲಾಗಿದೆ.
ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಸಮಾಜದಲ್ಲಿ ಗಣ್ಯ ಸ್ಥಾನದಲ್ಲಿರುವ ವ್ಯಕ್ತಿಗಳ ಟ್ವಿಟರ್ ಖಾತೆ ಅಧಿಕೃತವಾದದ್ದು ಎಂದು ಸೂಚಿಸಲು ಈ ರೀತಿಯ ಬ್ಲೂ ಟಿಕ್ನ್ನು ನೀಡಲಾಗುತ್ತದೆ. ಆದರೆ ಇಂದು ಬೆಳಗ್ಗೆ ದೇಶದ ಎರಡನೇ ಉನ್ನತ ಹುದ್ದೆಯಲ್ಲಿರುವ ವೆಂಕಯ್ಯ ನಾಯ್ಡು ಅವರ ಟ್ವಿಟರ್ ಖಾತೆಯ ಬ್ಲೂ ಮಾರ್ಕ್ ಅಳಿಸಿ ಹೋಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
