alex Certify ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಟ್ವಿಟರ್​ ಖಾತೆಯಲ್ಲಿ ‘ಕಾಂಗ್ರೆಸ್​’ಗೆ ಕೊಕ್…​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಟ್ವಿಟರ್​ ಖಾತೆಯಲ್ಲಿ ‘ಕಾಂಗ್ರೆಸ್​’ಗೆ ಕೊಕ್…​..!

‘ಮಾಜಿ ಸೇನಾಧಿಕಾರಿ, ಪಂಜಾಬ್​ನ ಮಾಜಿ ಮುಖ್ಯಮಂತ್ರಿ, ರಾಜ್ಯಕ್ಕೆ ಸೇವೆ ಮುಂದುವರಿಯುತ್ತಿದೆ’ – ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾಹಿತಿ ನೀಡಿರುವ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ತಮ್ಮ ಟ್ವಿಟರ್​ನ ಬಯೋವನ್ನು ಈ ರೀತಿಯಾಗಿ ಬದಲಿಸಿಕೊಂಡಿದ್ದಾರೆ. ಕಾಂಗ್ರೆಸ್​​ಗೆ ರಾಜೀನಾಮೆ ನೀಡಿದ ಬಳಿಕ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಮುಂದಿನ ನಡೆ ಏನು ಎಂಬ ಕುತೂಹಲ ಈಗಾಗಲೇ ಮನೆ ಮಾಡಿದೆ.

ಕಾಂಗ್ರೆಸ್​ ತೊರೆದ ಅಮರೀಂದರ್​ ಸಿಂಗ್​ ಬಿಜೆಪಿಗೆ ಹೋಗ್ತಾರಾ ಎಂಬ ವದಂತಿಗಳಿಗೆ ಈಗಾಗಲೇ ತೆರೆ ಎಳೆದಿರುವ ಕ್ಯಾಪ್ಟನ್​ ಬಿಜೆಪಿ ಸೇರ್ಪಡೆಯ ಮಾತನ್ನು ಅಲ್ಲಗಳೆದಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲೇ ಕಾಂಗ್ರೆಸ್​ನಿಂದ ಹೊರಬರುವ ಸೂಚನೆ ನೀಡಿದ್ದ ಅಮರೀಂದರ್ ಸಿಂಗ್​, ನಾನು ಕಾಂಗ್ರೆಸ್​ಗೆ ರಾಜೀನಾಮೆ ನೀಡಿಲ್ಲ. ಆದರೆ ಖಂಡಿತವಾಗಿಯೂ ರಾಜೀನಾಮೆ ನೀಡುತ್ತೇನೆ, ಕಾಂಗ್ರೆಸ್​ನವರು ನನ್ನನ್ನು ಇದೇ ರೀತಿ ನಡೆಸಿಕೊಂಡಲ್ಲಿ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ಇದೀಗ ಟ್ವಿಟರ್​ನಲ್ಲಿ ಕಾಂಗ್ರೆಸ್ ಎನ್ನುವ ಪದವು ಮಾಯವಾಗಿದೆ.

ಇಂದು ಅಮರೀಂದರ್​ ಸಿಂಗ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​​ರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಕೇಂದ್ರ ಸಚಿವ ಅಮಿತ್​ ಶಾರನ್ನು ಭೇಟಿಯಾದ ಬಳಿಕ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಗುಮಾನಿ ಎದ್ದಿತ್ತು. ಆದರೆ ಈ ವದಂತಿಗೂ ಕ್ಯಾಪ್ಟನ್​ ತೆರೆ ಎಳೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...