alex Certify ಅವಳಿ ವರರ ವರಿಸಿದ ಅವಳಿ ವಧುಗಳು: ಅಪರೂಪದ ವಿವಾಹ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ವರರ ವರಿಸಿದ ಅವಳಿ ವಧುಗಳು: ಅಪರೂಪದ ವಿವಾಹ ವೈರಲ್​

ಕೋಲ್ಕತಾ: ಒಂದೇ ಕುಟುಂಬದಲ್ಲಿ ಒಡಹುಟ್ಟಿದವರು ಮದುವೆಯಾಗುವುದು ಸಾಮಾನ್ಯ ಆದರೆ, ಅವಳಿಗಳು ಅವಳಿ ಮಕ್ಕಳನ್ನು ಮದುವೆಯಾಗುವುದು ಸಾಮಾನ್ಯ ಸಂಗತಿಯಲ್ಲ. ಅಂಥ ಒಂದು ಮದುವೆ ಇದೀಗ ವೈರಲ್​ ಆಗಿದೆ.

ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ನ ಅವಳಿ ಸಹೋದರಿಯರಾದ ಅರ್ಪಿತಾ ಮತ್ತು ಪರಮಿತಾ ಅವರು ಅವಳಿ ಸಹೋದರರಾದ ಲವ್ ಮತ್ತು ಕುಶ್ ಅವರೊಂದಿಗೆ ಮದುವೆಯಾಗಿದ್ದಾರೆ.

ಚಿಕ್ಕವರಿರುವಾಗಿನಿಂದಲೂ ಅರ್ಪಿತಾ ಮತ್ತು ಪರಮಿತಾ ಅವರು ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಸಹೋದರಿಯರು ಎಂದಿಗೂ ಬೇರೆಯಾಗಿರಲಿಲ್ಲ. ಅವರು ಒಂದೇ ಶಾಲೆಯಲ್ಲಿ ಓದುತ್ತಿದ್ದರು ಮತ್ತು ಅದೇ ಕಾಲೇಜಿಗೆ ಹೋಗುತ್ತಿದ್ದರು. ಅವಳಿ ಸಹೋದರರನ್ನು ಮದುವೆಯಾಗುವುದು ಅವರ ಆಸೆಯಾಗಿತ್ತು. ತಮ್ಮ ಮಕ್ಕಳ ಆಸೆಯನ್ನು ತಂದೆ-ತಾಯಿ ಈಡೇರಿಸಿದ್ದಾರೆ.

ಕಾಕತಾಳೀಯವೆಂಬಂತೆ ಅವಳಿ ಹುಡುಗರ ಕುಟುಂಬವೂ ಅವಳಿ ವಧುಗಳನ್ನು ಹುಡುಕುತ್ತಿತ್ತು. ಎಲ್ಲರಿಗೂ ಕಂಕಣಭಾಗ್ಯ ಕೂಡಿ ಬಂದಿದ್ದು, ಮದುವೆಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...