
ಸಾಮಾಜಿಕ ಜಾಲತಾಣದಲ್ಲಿ ಡ್ಯಾನ್ಸ್ ವಿಡಿಯೋಗಳಿಗೆ ಬರವಿಲ್ಲ. ಇಂಥದ್ದೇ ಮತ್ತೊಂದು ವಿಡಿಯೋದ ಲಿಂಕ್ ಅನ್ನು ನಾವಿಲ್ಲಿ ಶೇರ್ ಮಾಡುತ್ತಿದ್ದು, ಇದು ನಿಮ್ಮ ಮೊಗದಲ್ಲಿ ಖುಷಿ ಮೂಡಿಸುತ್ತದೆ.
ಸಾರಾ ಅಲಿಖಾನ್ ನಟನೆಯ ’ಚಕಾ ಚಕ್’ ಹಾಡಿಗೆ ಅವಳಿ ಸಹೋದರಿಯರು ಸ್ಟೆಪ್ ಹಾಕುತ್ತಿರುವ ಈ ವಿಡಿಯೋ ವೈರಲ್ ಆಗಿದೆ. ಇನ್ಸ್ಟಾಗ್ರಾಂನಲ್ಲಿ ಟಾನಿಕಾ ಮತ್ತು ಟಾರಿಕಾ ಎಂಬ ಬಳಕೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನಸುಗೆಂಪು ಸೀರೆಯಲ್ಲಿ ಮಿಂಚುತ್ತಿರುವ ಸಹೋದರಿಯರು ಈ ಕ್ಯಾಚಿ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ.
“ಹೊಟ್ಟೆಪಾಡಿಗೆ ಇಂಜಿನಿಯರ್ ಆಗಿ, ಇಚ್ಛೆಯಿಂದ ನೃತಪಟುಗಳಾದವರು,” ಎಂದು ಅವಳಿ ಸಹೋದರಿಯರ ಬಯೋದಲ್ಲಿ ಪರಿಚಯಿಸಲಾಗಿದೆ.
https://www.youtube.com/watch?v=pKOiOFjRjeI