alex Certify BIG NEWS: ಹಿಟ್ ಆಂಡ್ ರನ್ ಗೆ ಯುವಕ ಬಲಿ: ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಹರಿದ ಕ್ಯಾಂಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಿಟ್ ಆಂಡ್ ರನ್ ಗೆ ಯುವಕ ಬಲಿ: ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಹರಿದ ಕ್ಯಾಂಟರ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಹಿಟ್ ಆಂಡ್ ರನ್ ಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಹೆಬ್ಬಾಳದ ರಿಂಗ್ ರಸ್ತೆಯಲ್ಲಿ ನಡೆದಿದೆ.

ಹೆಬ್ಬಾಳ ರಿಂಗ್ ರಸ್ತೆಯನ್ನು ದಾಟುತ್ತಿದ್ದ ಯುವಕನ ಮೇಲೆ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ಯುವಕನ ಮೇಲೆಯೇ ಕ್ಯಾಂಟರ್ ಹತ್ತಿಕೊಂಡು ಹೋಗಿದೆ. ಯುವಕ ನಡುರಸ್ತೆಯಲ್ಲಿ ನರಳುತ್ತಿದ್ದರೂ ನಿಲ್ಲಿಸದ ಕ್ಯಾಂಟರ್ ಚಾಲಕ ವಾಹನ ಚಲಾಯಿಸಿಕೊಂಡು ಹೋಗಿದ್ದಾನೆ.

ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಬಾಪಿ ಕುಮಾರ್(23) ನಿನ್ನೆ ರಾತ್ರಿ 11 ಗಂಟೆಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಹೆಬ್ಬಾಳ ಕಡೆಯಿಂದ ಕೆ ಆರ್ ಪುರಂನತ್ತ ತೆರಳುತ್ತಿದ್ದ ಕ್ಯಾಂಟರ್ ಬಾಪಿ ಕುಮಾರ್ ನ ಮೇಲೆಯೇ ಹರಿದಿದೆ. ಈ ಘೋರ ದೃಶ್ಯವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಮಾಹಿತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...