alex Certify ನೇರ ಪ್ರಸಾರದಲ್ಲೇ ವಿಶ್ರಾಂತಿ ಪಡೆಯಲು ಹೋಗಿ ಟ್ರೋಲಿಗೊಳಗಾದ ನಿರೂಪಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೇರ ಪ್ರಸಾರದಲ್ಲೇ ವಿಶ್ರಾಂತಿ ಪಡೆಯಲು ಹೋಗಿ ಟ್ರೋಲಿಗೊಳಗಾದ ನಿರೂಪಕ…!

ನ್ಯೂಸ್​ ಚಾನೆಲ್​ಗಳಲ್ಲಿ ಆ್ಯಂಕರ್​ ಕೆಲಸ ಮಾಡುವುದು ಅಂದರೆ ಸುಲಭದ ಮಾತಲ್ಲ. ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ನಿರರ್ಗಳವಾಗಿ ಗಂಟೆಗಟ್ಟಲೇ ಮಾತನಾಡಬೇಕು. ಕೆಲವು ದಿನಗಳಲ್ಲಿ ಸುದ್ದಿ ವಾಚಕರಿಗೆ ವಿರಾಮ ಕೂಡ ಸಿಗೋದಿಲ್ಲ.

ಇದೇ ರೀತಿ ವಿಶ್ರಾಂತಿ ಪಡೆಯದೇ ಕೆಲಸ ಮಾಡಿದ್ದ ಬಿಬಿಸಿ ನಿರೂಪಕ ನ್ಯೂಸ್​ ಡೆಸ್ಕ್​ನ ಮೇಲೆ ತನ್ನ ಕಾಲು ಚಾಚಿ ಕುಳಿತಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ನೆಟ್ಟಿಗರು ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಬಿಬಿಸಿ ಸುದ್ದಿ ವಾಹಿನಿಯ ಆ್ಯಂಕರ್​ ಟಿಮ್​ ವಿಲ್​ಕಾಕ್ಸ್​ ನೇರ ಪ್ರಸಾರದ ಸಮಯದಲ್ಲಿಯೇ ನ್ಯೂಸ್ ಡೆಸ್ಕ್​ನ ಮೇಲೆ ತನ್ನ ಕಾಲುಗಳನ್ನು ಇಟ್ಟು ವಿಶ್ರಾಂತಿ ಪಡೆದಿದ್ದಾರೆ. ಕೇವಲ ಆರು ಸೆಕೆಂಡುಗಳ ಕಾಲ ಅವರು ರೀತಿ ಮಾಡಿದ್ದರೂ ಸಹ ನೆಟ್ಟಿಗರು ಸೋಶಿಯಲ್​ ಮೀಡಿಯಾದಲ್ಲಿ ಟಿಮ್​ ವಿಲ್​ಕಾಕ್ಸ್​​​ನ್ನು ಗೇಲಿ ಮಾಡಿದ್ದಾರೆ.

ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​​​ ಸಂಪುಟದಲ್ಲಿ ನಡೆಯುತ್ತಿರುವ ಸಂಸದರ ರಾಜೀನಾಮೆ ನೀಡುತ್ತಿರುವ ಬಗ್ಗೆ ವರದಿಗಾರ ರಾಸ್​ ಅಟ್ಕಿನ್ಸ್​ ಡೌನಿಂಗ್​ ಸ್ಟ್ರೀಟ್​ನಿಂದ ನೇರ ವರದಿ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ವಿಡಿಯೋ ಲಕ್ಷಕ್ಕೂ ಅಧಿಕ ವೀವ್ಸ್​ ಪಡೆದಿದೆ. ಕನಿಷ್ಟ ನಿರೂಪಕ ಪ್ಯಾಂಟ್​ ಧರಿಸಿದ್ದಾರೆ ಎಂಬುದು ನಮಗೆ ಖಾತ್ರಿ ಆಯ್ತು ಅಂತಾ ನೆಟ್ಟಿಗರು ಸುದ್ದಿ ವಾಚಕರನ್ನು ಆಡಿಕೊಂಡಿದ್ದಾರೆ.

— Gavan Reilly (@gavreilly) July 6, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...