
ಇದೇ ರೀತಿ ವಿಶ್ರಾಂತಿ ಪಡೆಯದೇ ಕೆಲಸ ಮಾಡಿದ್ದ ಬಿಬಿಸಿ ನಿರೂಪಕ ನ್ಯೂಸ್ ಡೆಸ್ಕ್ನ ಮೇಲೆ ತನ್ನ ಕಾಲು ಚಾಚಿ ಕುಳಿತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಿಬಿಸಿ ಸುದ್ದಿ ವಾಹಿನಿಯ ಆ್ಯಂಕರ್ ಟಿಮ್ ವಿಲ್ಕಾಕ್ಸ್ ನೇರ ಪ್ರಸಾರದ ಸಮಯದಲ್ಲಿಯೇ ನ್ಯೂಸ್ ಡೆಸ್ಕ್ನ ಮೇಲೆ ತನ್ನ ಕಾಲುಗಳನ್ನು ಇಟ್ಟು ವಿಶ್ರಾಂತಿ ಪಡೆದಿದ್ದಾರೆ. ಕೇವಲ ಆರು ಸೆಕೆಂಡುಗಳ ಕಾಲ ಅವರು ರೀತಿ ಮಾಡಿದ್ದರೂ ಸಹ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಟಿಮ್ ವಿಲ್ಕಾಕ್ಸ್ನ್ನು ಗೇಲಿ ಮಾಡಿದ್ದಾರೆ.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸಂಪುಟದಲ್ಲಿ ನಡೆಯುತ್ತಿರುವ ಸಂಸದರ ರಾಜೀನಾಮೆ ನೀಡುತ್ತಿರುವ ಬಗ್ಗೆ ವರದಿಗಾರ ರಾಸ್ ಅಟ್ಕಿನ್ಸ್ ಡೌನಿಂಗ್ ಸ್ಟ್ರೀಟ್ನಿಂದ ನೇರ ವರದಿ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ವಿಡಿಯೋ ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿದೆ. ಕನಿಷ್ಟ ನಿರೂಪಕ ಪ್ಯಾಂಟ್ ಧರಿಸಿದ್ದಾರೆ ಎಂಬುದು ನಮಗೆ ಖಾತ್ರಿ ಆಯ್ತು ಅಂತಾ ನೆಟ್ಟಿಗರು ಸುದ್ದಿ ವಾಚಕರನ್ನು ಆಡಿಕೊಂಡಿದ್ದಾರೆ.