alex Certify ಸುದ್ದಿ ಓದುತ್ತಿರುವಾಗಲೇ ಸಂಸ್ಥೆ ಸಂಬಳ ಕೊಟ್ಟಿಲ್ಲವೆಂಬ ಸಂಕಷ್ಟ ತೋಡಿಕೊಂಡ ಪತ್ರಕರ್ತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುದ್ದಿ ಓದುತ್ತಿರುವಾಗಲೇ ಸಂಸ್ಥೆ ಸಂಬಳ ಕೊಟ್ಟಿಲ್ಲವೆಂಬ ಸಂಕಷ್ಟ ತೋಡಿಕೊಂಡ ಪತ್ರಕರ್ತ….!

ಪತ್ರಕರ್ತರು ದಿನಂಪೂರ್ತಿ ದುಡಿದರೂ ಅವರಿಗೆ ಸಿಗೋ ಆದಾಯ ಅಷ್ಟಕಷ್ಟೇ ಅನ್ನೋ ಮಾತು ನಮ್ಮ ದೇಶದಲ್ಲಿ ಇದೆ. ಆದರೆ ಈ ಮಾತು ಇದೀಗ ವಿದೇಶದಲ್ಲೂ ಕೇಳಿ ಬರ್ತಿದೆ. ಇದಕ್ಕೆ ಕಾರಣ ಪಶ್ಚಿಮ ಆಫ್ರಿಕಾದ ಜಾಂಬಿಯಾದ ಪತ್ರಕರ್ತ…! ನ್ಯೂಸ್​ ಲೈವ್​ನಲ್ಲಿ ಇರುವಾಗಲೇ ಈ ಪತ್ರಕರ್ತ ತಮಗೆ ಹಾಗೂ ತನ್ನ ಸಹೋದ್ಯೋಗಿಗಳಿಗೆ ಸಂಸ್ಥೆ ಸಂಬಳವನ್ನೇ ನೀಡಿಲ್ಲ ಎಂದು ಹೇಳಿದ್ದಾರೆ.

ಕಬಿಂದಾ ಕಲಿಮಿನಾ ಎಂಬವರು ನ್ಯೂಸ್​ ಓದುತ್ತಿರುವ ನಡುವೆಯೇ ತಾವು ಹಾಗೂ ತಮ್ಮ ಸಹೋದ್ಯೋಗಿಗಳು ಇನ್ನೂ ಸಂಬಳವನ್ನೇ ಪಡೆದಿಲ್ಲ. ನ್ಯೂಸ್​ಗಳನ್ನ ಹೊರತುಪಡಿಸಿ ನಾವು ಸಹ ಮನುಷ್ಯರೇ. ನಮಗೂ ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಆದರೆ ನಮಗೆ ಕೆಬಿಎನ್​ ಇನ್ನೂ ಸಂಬಳ ನೀಡಿಲ್ಲ. ನಮಗೆ ಸಂಬಳದ ಅವಶ್ಯಕತೆ ಇದೆ ಎಂದು ಲೈವ್​ನಲ್ಲಿಯೇ ಹೇಳಿಕೊಂಡಿದ್ದಾರೆ. ಆದರೆ ಕೆಬಿಎನ್​ ಟಿವಿಯ ಸಿಇಓ ಕೆನ್ನೆಡಿ ಕೆ. ಮಾಂಬ್ವೆ ಪತ್ರಕರ್ತನ ಈ ವರ್ತನೆಯನ್ನ ಫೇಸ್​ಬುಕ್​ನಲ್ಲಿ ಖಂಡಿಸಿದ್ದಾರೆ.

ನ್ಯೂಸ್​ ನಡುವೆಯೇ ಕಲಿಮಿನಾ ಕುಡುಕನಂತೆ ವರ್ತಿಸಿದ್ದಾನೆ. ಪಾರ್ಟ್​ ಟೈಮ್​ ಕೆಲಸ ಮಾಡುವ ಈತ ಏಕೆ ಹೀಗೆ ನಡೆದುಕೊಂಡ ಅನ್ನೋದ್ರ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...