ಪತ್ರಕರ್ತರು ದಿನಂಪೂರ್ತಿ ದುಡಿದರೂ ಅವರಿಗೆ ಸಿಗೋ ಆದಾಯ ಅಷ್ಟಕಷ್ಟೇ ಅನ್ನೋ ಮಾತು ನಮ್ಮ ದೇಶದಲ್ಲಿ ಇದೆ. ಆದರೆ ಈ ಮಾತು ಇದೀಗ ವಿದೇಶದಲ್ಲೂ ಕೇಳಿ ಬರ್ತಿದೆ. ಇದಕ್ಕೆ ಕಾರಣ ಪಶ್ಚಿಮ ಆಫ್ರಿಕಾದ ಜಾಂಬಿಯಾದ ಪತ್ರಕರ್ತ…! ನ್ಯೂಸ್ ಲೈವ್ನಲ್ಲಿ ಇರುವಾಗಲೇ ಈ ಪತ್ರಕರ್ತ ತಮಗೆ ಹಾಗೂ ತನ್ನ ಸಹೋದ್ಯೋಗಿಗಳಿಗೆ ಸಂಸ್ಥೆ ಸಂಬಳವನ್ನೇ ನೀಡಿಲ್ಲ ಎಂದು ಹೇಳಿದ್ದಾರೆ.
ಕಬಿಂದಾ ಕಲಿಮಿನಾ ಎಂಬವರು ನ್ಯೂಸ್ ಓದುತ್ತಿರುವ ನಡುವೆಯೇ ತಾವು ಹಾಗೂ ತಮ್ಮ ಸಹೋದ್ಯೋಗಿಗಳು ಇನ್ನೂ ಸಂಬಳವನ್ನೇ ಪಡೆದಿಲ್ಲ. ನ್ಯೂಸ್ಗಳನ್ನ ಹೊರತುಪಡಿಸಿ ನಾವು ಸಹ ಮನುಷ್ಯರೇ. ನಮಗೂ ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಆದರೆ ನಮಗೆ ಕೆಬಿಎನ್ ಇನ್ನೂ ಸಂಬಳ ನೀಡಿಲ್ಲ. ನಮಗೆ ಸಂಬಳದ ಅವಶ್ಯಕತೆ ಇದೆ ಎಂದು ಲೈವ್ನಲ್ಲಿಯೇ ಹೇಳಿಕೊಂಡಿದ್ದಾರೆ. ಆದರೆ ಕೆಬಿಎನ್ ಟಿವಿಯ ಸಿಇಓ ಕೆನ್ನೆಡಿ ಕೆ. ಮಾಂಬ್ವೆ ಪತ್ರಕರ್ತನ ಈ ವರ್ತನೆಯನ್ನ ಫೇಸ್ಬುಕ್ನಲ್ಲಿ ಖಂಡಿಸಿದ್ದಾರೆ.
ನ್ಯೂಸ್ ನಡುವೆಯೇ ಕಲಿಮಿನಾ ಕುಡುಕನಂತೆ ವರ್ತಿಸಿದ್ದಾನೆ. ಪಾರ್ಟ್ ಟೈಮ್ ಕೆಲಸ ಮಾಡುವ ಈತ ಏಕೆ ಹೀಗೆ ನಡೆದುಕೊಂಡ ಅನ್ನೋದ್ರ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.