alex Certify ಸರಣಿ ರಜೆ ಹಿನ್ನಲೆ ತಿರುಪತಿಗೆ ಹರಿದು ಬಂದ ಭಕ್ತ ಸಾಗರ: ವಿಐಪಿ ದರ್ಶನಕ್ಕೆ ಬ್ರೇಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರಣಿ ರಜೆ ಹಿನ್ನಲೆ ತಿರುಪತಿಗೆ ಹರಿದು ಬಂದ ಭಕ್ತ ಸಾಗರ: ವಿಐಪಿ ದರ್ಶನಕ್ಕೆ ಬ್ರೇಕ್

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡತೊಡಗಿದ್ದಾರೆ.

ಭಾರಿ ಜನಸಂದಣಿ ಉಂಟಾದ ಹಿನ್ನೆಲೆಯಲ್ಲಿ ಆಗಸ್ಟ್ 21 ರವರೆಗೆ ವಿಐಪಿ ದರ್ಶನ ಇರುವುದಿಲ್ಲ. ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಮುಖ್ಯಸ್ಥ ವೈ.ವಿ. ಸುಬ್ಬಾರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ವಾತಂತ್ರ್ಯ ದಿನದ ರಜೆ ಸೇರಿದಂತೆ ಸರಣಿ ರಜೆಗಳು ಇರುವ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಿಂದ ತಿರುಪತಿಗೆ ಬರುವ ಭಕ್ತರ ಸಂಖ್ಯೆ ಭಾರಿ ಏರಿಕೆ ಕಂಡಿದೆ. ಇದಲ್ಲದೇ, ತಿರುಮಲದಲ್ಲಿ ವಿವಾಹ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿದ್ದು, ಜನಸಂದಣಿ ನಿಯಂತ್ರಿಸಲು ಮತ್ತು ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ತಿರುಮಲದಲ್ಲಿ ಆಗಸ್ಟ್ 21 ರವರೆಗೆ ವಿಐಪಿ ದರ್ಶನ ನಿಲ್ಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...