ಬೆಂಗಳೂರು: ತುಮಕೂರು ಜಿಲ್ಲೆ ಪಳವಳ್ಳಿ ಗ್ರಾಮದ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಸಂಭವಿಸಿದ ದುರಂತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.
ಈ ಘಟನೆಗೆ ಬಸ್ ಚಾಲಕನ ನಿರ್ಲಕ್ಷದ ಚಾಲನೆಯೇ ಕಾರಣವಾಗಿದೆ. ಚಾಲಕ ತಿರುವಿನಲ್ಲಿಯೂ ಅತಿ ವೇಗವಾಗಿ ಬಸ್ ಚಾಲನೆ ಮಾಡಿದ್ದಾನೆ, ಪ್ರಯಾಣಿಕರು ಎಚ್ಚರಿಸಿ ಸೂಚನೆ ನೀಡಿದರೂ ಚಾಲಕ ನಿರ್ಲಕ್ಷ ತೋರಿದ್ದಾನೆ.
ಇನ್ನು ಆ ಮಾರ್ಗದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಇರಲಿಲ್ಲ. ವೈಎನ್ ಹೊಸಕೋಟೆ ಪೊಲೀಸರು ಎರಡು ಬಸ್ ಗಳನ್ನು ಸೀಜ್ ಮಾಡಿದ್ದರು. ಸೂಕ್ತ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಬಸ್ ಗಳನ್ನು ಸೀಜ್ ಮಾಡಲಾಗಿತ್ತು. ಇದರಿಂದಾಗಿ ಆ ಮಾರ್ಗದಲ್ಲಿ ಸೂಕ್ತ ಬಸ್ ವ್ಯವಸ್ಥೆ ಇರಲಿಲ್ಲ.
ಪಳವಳ್ಳಿ ಕಟ್ಟೆಯ ಮೇಲೆ ಪದೇ ಪದೇ ಅಪಘಾತಗಳು ಆಗುತ್ತಿದ್ದರೂ, ಆದರೂ, ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಅಪಘಾತ ವಲಯವಾಗಿದ್ದರೂ ಸೂಚನಾ ಫಲಕ ಅಳವಡಿಸಿರಲಿಲ್ಲ. ವೇಗ ನಿಯಂತ್ರಣಕ್ಕೆ ರೋಡ್ ಹಂಪ್ಸ್ ಕೂಡ ಹಾಕಿರಲಿಲ್ಲ. ಈ ಮಾರ್ಗದಲ್ಲಿ ಸೂಕ್ತ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲವಾಗಿದ್ದು, ಇರುವ ಒಂದೆರಡು ಖಾಸಗಿ ಬಸ್ ಗಳಲ್ಲಿ ಸಂಚರಿಸಬೇಕಿದೆ.