alex Certify ತುಳಸಿ ಬೀಜಗಳಲ್ಲೂ ಅಡಗಿದೆ ಆರೋಗ್ಯದ ನಿಧಿ..…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಳಸಿ ಬೀಜಗಳಲ್ಲೂ ಅಡಗಿದೆ ಆರೋಗ್ಯದ ನಿಧಿ..…!

ತುಳಸಿ ಭಾರತೀಯ ಧಾರ್ಮಿಕ ಸಂಪ್ರದಾಯಗಳಲ್ಲಿ ಅತ್ಯಂತ ಪೂಜನೀಯ. ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ನೆಟ್ಟು ಪೂಜಿಸುವುದು ಸಾಮಾನ್ಯ. ಸಾಮಾನ್ಯವಾಗಿ ಅಂಗಳದಲ್ಲಿ ತುಳಸಿ ಗಿಡಗಳನ್ನು ನೆಡುತ್ತಾರೆ. ತುಳಸಿಗೆ ಆಯುರ್ವೇದದಲ್ಲೂ ಬಹಳ ಪ್ರಾಮುಖ್ಯತೆಯಿದೆ.

ತುಳಸಿಯನ್ನು ಔಷಧೀಯ ಗುಣಗಳ ನಿಧಿ ಎಂದು ಪರಿಗಣಿಸಲಾಗುತ್ತದೆ. ತುಳಸಿ ಎಲೆಗಳನ್ನು ಶೀತ-ಕೆಮ್ಮು ಮತ್ತು ಕಫವನ್ನು ಗುಣಪಡಿಸಲು ಬಳಸಲಾಗುತ್ತದೆ. ತುಳಸಿ ಬೀಜಗಳು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅವುಗಳಲ್ಲಿ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣವು ಹೇರಳವಾಗಿ ಕಂಡುಬರುತ್ತದೆ.

 1. ರೋಗ ನಿರೋಧಕ ಶಕ್ತಿ ಹೆಚ್ಚಳ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ತುಳಸಿ ಬೀಜಗಳಲ್ಲಿದೆ. ಇದು ಅನೇಕ ರೋಗಗಳು ಮತ್ತು ಸೋಂಕುಗಳಿಂದ ರಕ್ಷಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ತುಳಸಿ ಬೀಜಗಳ ಕಷಾಯ ಮಾಡಿ ಕುಡಿದರೆ ಇಮ್ಯೂನಿಟಿ ಹೆಚ್ಚುತ್ತದೆ.

2. ಜೀರ್ಣಕ್ರಿಯೆ ಸುಧಾರಣೆ

ನಿಮಗೆ ಮಲಬದ್ಧತೆ, ಅಸಿಡಿಟಿ, ಗ್ಯಾಸ್ ಸಮಸ್ಯೆ ಇದ್ದರೆ ತುಳಸಿ ಬೀಜಗಳನ್ನು ನೀರಿನಲ್ಲಿ ನೆನೆಸಿಕೊಂಡು ಕುಡಿಯಿರಿ. ಹೀಗೆ ಮಾಡುವುದರಿಂದ ಬೀಜದ ಮೇಲೆ ಆಮ್ಲೀಯತೆ ಉಂಟಾಗುತ್ತದೆ. ಬೀಜಗಳೊಂದಿಗೆ ನೀರನ್ನು ಸಹ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

3. ತೂಕವನ್ನು ಇಳಿಕೆ

ಹೆಚ್ಚುತ್ತಿರುವ ತೂಕದಿಂದ ತೊಂದರೆಗೊಳಗಾಗುವವರಿಗೆ ತುಳಸಿ ಬೀಜಗಳು ರಾಮಬಾಣಕ್ಕಿಂತ ಕಡಿಮೆಯಿಲ್ಲ. ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಫೈಬರ್‌ ಇದರಲ್ಲಿ ಸಮೃದ್ಧವಾಗಿದೆ. ತುಳಸಿ ಬೀಜಗಳ ಸೇವನೆಯಿಂದ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ. ಇದರಿಂದಾಗಿ ತೂಕ ಕ್ರಮೇಣ ಕಡಿಮೆಯಾಗುತ್ತದೆ.

4. ಉದ್ವೇಗ ದೂರವಾಗುತ್ತದೆ

ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ತುಳಸಿ ಬೀಜಗಳನ್ನು ಸಹ ಬಳಸಬಹುದು ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ನೀವು ಖಿನ್ನತೆ ಅಥವಾ ಒತ್ತಡವನ್ನು ಎದುರಿಸುತ್ತಿದ್ದರೆ ತುಳಸಿ ಬೀಜಗಳನ್ನು ತಿನ್ನಿರಿ. ಇದರಿಂದ ಆತಂಕ ದೂರವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...