ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದೀರಾ…? ವಿಪರೀತ ಸುಸ್ತು ನಿಮ್ಮನ್ನು ಸಾಕು ಮಾಡಿದೆಯಾ…? ಹಾಗಿದ್ದರೆ ಇಲ್ಲಿ ಕೇಳಿ. ವೈದ್ಯರು ಹೇಳಿದ ಔಷಧಗಳ ಹೊರತಾಗಿಯೂ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೇಗೆನ್ನುತ್ತಿರಾ…?
ತುಳಸಿ ಹಾಲಿನಿಂದ ನಿಮ್ಮ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು. 4-5 ತುಳಸಿ ಎಲೆಗಳನ್ನು ಸ್ವಚ್ಛವಾಗಿ ತೊಳೆಯಿರಿ. ಒಂದು ಲೋಟ ಹಾಲು ಕುದಿಸಿ. ಎರಡು ತುಳಸಿ ದಳ ಸೇರಿಸಿ ಎರಡು ನಿಮಿಷ ಸಿಮ್ ನಲ್ಲಿಟ್ಟು ಕುದಿಸಿ. ತಂಪಾದ ಬಳಿಕ ಈ ಹಾಲನ್ನು ಸೇವಿಸಿ. ಇದನ್ನು ಖಾಲಿ ಹೊಟ್ಟೆಗೆ ಸೇವಿಸಿದರೆ ಒಳ್ಳೆಯದು.
ತುಳಸಿಯಲ್ಲಿರುವ ಆಂಟಿ ಆಕ್ಸಿಡೆಂಟ್ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹಾಲು, ಹೃದಯಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಲಿನಲ್ಲಿ ಸಾಕಷ್ಟು ರೋಗನಿರೋಧಕ ಶಕ್ತಿ ಇದೆ. ಅಸ್ತಮಾ ರೋಗಿಗಳಿಗೆ ಇದು ಬಹುಪಕಾರಿ.
ಮೂತ್ರಕೋಶದ ವಿಷಕಾರಿ ಅಂಶಗಳನ್ನು ತೆಗೆಯುವುದರೊಂದಿಗೆ ಇವು ಅಲ್ಲಿನ ಕಲ್ಲುಗಳನ್ನು ಕರಗಿಸಲು ಶಕ್ತವಾಗಿದೆ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ ಕ್ಯಾನ್ಸರ್ ಲಕ್ಷಣಗಳ ವಿರುದ್ಧವೂ ಇದು ಹೋರಾಡುತ್ತದೆ.
ಇದರ ಹಾಲಿನ ಸೇವನೆಯಿಂದ ನಿಮ್ಮ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ತಲೆನೋವು ಹಾಗು ಮೈಗ್ರೇನ್ ಅನ್ನು ಕಡಿಮೆ ಮಾಡುತ್ತದೆ.