ಭಕ್ತರಿಗೆ ಆರೋಗ್ಯಕರ ಆಹಾರವನ್ನು ಒದಗಿಸುವ ಉದ್ದೇಶದಿಂದ ತಿರುಮಲ ತಿರುಪತಿ ಆಡಳಿತ ಮಂಡಳಿಯು ಕ್ಯಾಂಟೀನ್ ತೆರೆಯಲು ಉದ್ದೇಶಿಸಿದೆ. ಈ ಕ್ಯಾಂಟೀನ್ನಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಆರ್ಗಾನಿಕ್ ಆಹಾರಗಳನ್ನು ಮಾರಾಟ ಮಾಡಲಾಗುತ್ತದೆ.
ಟಿಟಿಡಿಗೆ ಸೇರಿದ ಎಸ್ವಿ ಗೆಸ್ಟ್ ಹೌಸ್ ಹಾಗೂ ಎಸ್ವಿ ಕ್ಯಾಂಟೀನ್ ಮಾದರಿಯಲ್ಲೇ ಈ ಕ್ಯಾಂಟೀನ್ನ್ನು ತೆರೆಯಲು ಯೋಚಿಸಲಾಗಿದೆ. ಯಾವುದೇ ಲಾಭ – ನಷ್ಟವಿಲ್ಲದೇ ಈ ಕ್ಯಾಂಟೀನ್ನ್ನು ತೆರೆಯಲು ಟಿಟಿಡಿ ಯೋಜನೆ ರೂಪಿಸಿದೆ.
ಸಂಪೂರ್ಣ ನೈರ್ಮಲ್ಯದಿಂದಿರುವ ಅಡುಗೆ ಮನೆಯಲ್ಲಿ ಉಪಹಾರ, ಮಧ್ಯಾಹ್ನ ಊಟ ಹಾಗೂ ರಾತ್ರಿಯ ಭೋಜನವನ್ನು ತಯಾರು ಮಾಡಲಾಗುತ್ತದೆ. ಇದನ್ನು ದೇಗುಲದ ದರ್ಶನಕ್ಕೆ ಬಂದ ಯಾತ್ರಾರ್ಥಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ಟಿಟಿಡಿ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.