
ಹಾಸನದ ಮಹಾರಾಜ ಪಾರ್ಕ್ನಲ್ಲಿ ಹಿಂದೂ ದೇವತೆಗಳನ್ನು ತೆಗಳಿದ ಮಹಿಳೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಣೆ ಮಾಡಲು ಮುಂದಾಗಿದ್ದಾಳೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಲ್ಲಿ ಯೇಸು ನಿಮಗೆ ಒಳ್ಳೆಯದು ಮಾಡುತ್ತಾನೆ ಎಂದು ಪುಸಲಾಯಿಸಿದ್ದಾಳೆ.
ಮಹಿಳೆಯ ಈ ಮತಾಂತರದ ಪ್ಲಾನ್ ಬಗ್ಗೆ ವಿದ್ಯಾರ್ಥಿಯೊಬ್ಬ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಹಿಂದೂ ಜಾಗರಣ ವೇದಿಕೆ ಯುವಕರು ಮತಾಂತರಕ್ಕೆ ಮುಂದಾಗಿದ್ದ ಮಹಿಳೆ ಹಾಗೂ ಆತನ ಪುತ್ರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾಸನ ನಗರ ಪಿಎಸ್ಐ ಅಭಿಷೇಕ್ ಕೂಡ ಸ್ಥಳಕ್ಕೆ ಆಗಮಿಸಿದ್ದು ಆರೋಪಿ ರಾಧಾ ಎಂಬಾಕೆಯನ್ನು ವಶಕ್ಕೆ ಪಡೆದಿದ್ದಾರೆ. ರಾಧ ಹಾಸನ ನಗರದ ದೇವೇಗೌಡ ನಗರ ನಿವಾಸಿ ಎಂದು ತಿಳಿದುಬಂದಿದೆ.
4
