alex Certify ದೇವಾಲಯದ ಫೋಟೋವನ್ನು ಶೇರ್‌ ಮಾಡಿಕೊಂಡ ನಟಿ ತ್ರಿಷಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಾಲಯದ ಫೋಟೋವನ್ನು ಶೇರ್‌ ಮಾಡಿಕೊಂಡ ನಟಿ ತ್ರಿಷಾ

ಮದ್ರಾಸ್ ಟಾಕೀಸ್ ಹಾಗು ಮಣಿ ರತ್ನಂರ ಗಾಲಾ ನಿರ್ಮಾಣದ ’ಪೊಣ್ಣಿಯಿನ್ ಸೆಲ್ವನ್’ ಚಿತ್ರೀಕರಣವು ಇದೀಗ ಮಧ್ಯ ಪ್ರದೇಶದಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ನಟಿಸುತ್ತಿರುವ ಪ್ರಕಾಶ್ ರಾಜ್ ಎರಡು ದಿನನಳ ಹಿಂದಷ್ಟೇ ಗ್ವಾಲಿಯರ್‌ ವಿಮಾನ ನಿಲ್ದಾಣದಲ್ಲಿ ಮಣಿರತ್ನಂ ಹಾಗೂ ಕಾರ್ತಿ ಜೊತೆಗಿರುವ ಫೋಟೋ ತೆಗೆದು ಶೇರ್‌ ಮಾಡಿದ್ದರು.

ಇದೀಗ ಚಿತ್ರದ ಶೂಟಿಂಗ್ ಓರ್ಚಾದಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನು ನಿರ್ವಹಿಸುತ್ತಿರುವ ನಟಿ ತ್ರಿಷಾ, ಓರ್ಚಾ ದೇವಸ್ಥಾನದ ಚಿತ್ರವೊಂದನ್ನು ತಮ್ಮ ಶೂಟಿಂಗ್ ಸ್ಪಾಟ್‌ನಿಂದ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಹಬ್ಬಕ್ಕೆ ಮಾಡಿ ಪರ್ಫೆಕ್ಟ್ ಕಜ್ಜಾಯ

ಮಧ್ಯ ಪ್ರದೇಶದ ಶೂಟಿಂಗ್‌ಗೂ ಮುನ್ನ ಪಾಂಡಿಚೆರಿಯಲ್ಲಿ ಶೂಟಿಂಗ್ ಮಾಡಿದ ಚಿತ್ರತಂಡ, ಕೋವಿಡ್ ಎರಡನೇ ಅಲೆ ತಣ್ಣಗಾದ ಬಳಿಕ ತನ್ನ ಚಟುವಟಿಕೆಯನ್ನು ಭರದಿಂದ ಮುಂದುವರೆಸಿದೆ. ಚಿತ್ರಕ್ಕೆ ಎ ಆರ್‌ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...