alex Certify BIG NEWS: ನಕಲಿ ಲಸಿಕೆ ಅಭಿಯಾನದಲ್ಲಿ ಮೊದಲ ಡೋಸ್​ ಪಡೆದಿದ್ದ ಸಂಸದೆ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಕಲಿ ಲಸಿಕೆ ಅಭಿಯಾನದಲ್ಲಿ ಮೊದಲ ಡೋಸ್​ ಪಡೆದಿದ್ದ ಸಂಸದೆ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರು….!

ನಾಲ್ಕು ದಿನಗಳ ಹಿಂದಷ್ಟೇ ಕೋಲ್ಕತ್ತಾದಲ್ಲಿ ನಕಲಿ ಲಸಿಕೆ ಅಭಿಯಾನಕ್ಕೆ ಅತಿಥಿಯಾಗಿ ಭೇಟಿ ನೀಡಿ ಮೊದಲ ಡೋಸ್​ ಸ್ವೀಕರಿಸಿದ್ದ ತೃಣಮೂಲ ಕಾಂಗ್ರೆಸ್​ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ.

ವೈದ್ಯರು ಮಿಮಿ ಚಕ್ರವರ್ತಿಯ ಆರೋಗ್ಯ ತಪಾಸಣೆ ನಡೆಸಿದ್ದು ನಕಲಿ ಲಸಿಕೆಯಿಂದಲೇ ಈ ರೀತಿ ಆಗಿದೆ ಎಂದು ಈಗಲೇ ಹೇಳೋದು ಕಷ್ಟ ಎಂದಿದ್ದಾರೆ.
ಮಿಮಿ ಕುಟುಂಬಸ್ಥರು ನೀಡಿರುವ ಮಾಹಿತಿಯ ಪ್ರಕಾರ ಇವರು ನಿರ್ಜಲೀಕರಣ, ಹೊಟ್ಟೆ ನೋವು ಹಾಗೂ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಮಿಮಿ ಚಕ್ರವರ್ತಿ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬುಧವಾರ ಐಎಎಸ್​ ಅಧಿಕಾರಿಯ ಸೋಗಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ನಕಲಿ ಲಸಿಕಾ ಅಭಿಯಾನ ನಡೆಸಲು ಹೋಗಿ ಜೈಲುಪಾಲಾಗಿದ್ದ. ಈ ಲಸಿಕೆ ಅಭಿಯಾನಕ್ಕೆ ಅತಿಥಿಯಾಗಿ ಹೋಗಿದ್ದ ಮಿಮಿ ಜನರನ್ನ ಪ್ರೇರೆಪಿಸುವ ಸಲುವಾಗಿ ತಾವೂ ಸಹ ಇಲ್ಲಿ ಲಸಿಕೆಯನ್ನ ಪಡೆದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...