alex Certify ಈ ಫೋಟೋದಲ್ಲಿರುವ ಇಬ್ಬರು​ ಖ್ಯಾತ ತಾರೆಯರನ್ನು ಗುರುತಿಸಬಲ್ಲಿರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಫೋಟೋದಲ್ಲಿರುವ ಇಬ್ಬರು​ ಖ್ಯಾತ ತಾರೆಯರನ್ನು ಗುರುತಿಸಬಲ್ಲಿರಾ…?

ಬಾಲಿವುಡ್​ನಲ್ಲಿ ಛಾಪನ್ನು ಮೂಡಿಸುವ ಮುನ್ನ ದೀಪಿಕಾ ಪಡುಕೋಣೆ ಹಾಗೂ ಕತ್ರೀನಾ ಕೈಫ್​ ಇಬ್ಬರೂ ಮಾಡೆಲಿಂಗ್​ ಲೋಕದಲ್ಲಿ ಇದ್ದವರು ಎಂಬ ವಿಚಾರ ಹೊಸತೇನಲ್ಲ.

ಮಾಜಿ ಟಾಪ್​ ಮಾಡೆಲ್​​ ಹಾಗೂ ನಟ ಮಾರ್ಕ್​ ರಾಬಿನ್ಸನ್​​ ಸೋಶಿಯಲ್​ ಮೀಡಿಯಾ ವೇದಿಕೆಯಲ್ಲಿ ಹಳೆಯ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

ಈ ಫೋಟೋದಲ್ಲಿ ಮಾರ್ಕ್​ ರಾಬಿನ್ಸನ್​ ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್​, ಸೋಫಿ ಚೌಧರಿ ಸೇರಿದಂತೆ ಹಲವರನ್ನು ಟ್ಯಾಗ್​ ಮಾಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ದೀಪಿಕಾ ಹಾಗೂ ಕತ್ರೀನಾರನ್ನು ಗುರುತಿಸೋಕೆ ಆಗುತ್ತಿಲ್ಲ ಎನ್ನುತ್ತಿದ್ದಾರೆ.

ಅಂದ ಹಾಗೆ ಈ ಫೋಟೋದಲ್ಲಿ ದೀಪಿಕಾ ಪಡುಕೋಣೆ ಹಾಗೂ ಕತ್ರೀನಾ ಕೈಫ್​ ಬಲಬದಿಯ ತುದಿಯಲ್ಲಿ ನಿಂತಿದ್ದಾರೆ.

ಪ್ರಸ್ತುತ ದೀಪಿಕಾ ಪಡುಕೋಣೆ ʼಪಠಾಣ್ʼ​ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ, ಜಾನ್​ ಅಬ್ರಾಹಂ ಹಾಗೂ ಶಾರೂಕ್​ ಖಾನ್​ ಜೊತೆ ಸ್ಕ್ರೀನ್​ ಶೇರ್​ ಮಾಡಲಿದ್ದಾರೆ.

ಇದನ್ನು ಹೊರತುಪಡಿಸಿ ಶಕೂನ್​ ಬಾತ್ರಾರ ಇನ್ನೂ ಹೆಸರಿಡದ ಸಿನಿಮಾ ಹಾಗೂ ಕಬೀರ್​ ಖಾನ್​ರ ʼ83ʼ ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕತ್ರೀನಾ ಕೈಫ್​​ ತಮ್ಮ ಮುಂಬರುವ ಸಿನಿಮಾ ʼಟೈಗರ್​ 3ʼ ಶೂಟಿಂಗ್​ ನಿಮಿತ್ತ ಸಲ್ಮಾನ್​ ಖಾನ್​ ಜೊತೆಯಲ್ಲಿ ಟರ್ಕಿಯಲ್ಲಿದ್ದಾರೆ. ಇದನ್ನು ಹೊರತುಪಡಿಸಿ ʼಫೋನ್ ಭೂತ್ʼ​ ಹಾಗೂ ʼಸೂರ್ಯವಂಶಿʼಯಲ್ಲಿಯೂ ಕತ್ರಿನಾ ಕಾಣಿಸಿಕೊಳ್ಳಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...