ಸ್ವಾರ್ಥಕ್ಕಾಗಿ ಮರಗಳನ್ನ ಕಡಿಯುವವರ ಸಂಖ್ಯೆಯೇ ಹೆಚ್ಚಾಗಿರುವ ಈ ಕಾಲದಲ್ಲಿ ಜಾರ್ಖಂಡ್ನಲ್ಲಿ ಒಂದಷ್ಟು ಯುವಕರು ಮಾಡಿದ ಮಾನವೀಯ ಕಾರ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಭಾರೀ ಪ್ರಶಂಸೆಯನ್ನ ಗಿಟ್ಟಿಸಿಕೊಳ್ತಿದೆ.
ಜಾರ್ಖಂಡ್ನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸಂಜಯ್ ಕುಮಾರ್ ಎಂಬವರು ಈ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆರು ಮಂದಿ ಯುವಕರ ಗುಂಪೊಂದು ಮರವನ್ನ ಕಡಿಯೋದ್ರ ಬದಲಾಗಿ ಅದನ್ನ ಬುಡ ಸಮೇತ ಕಿತ್ತು ಹೆಗಲ ಮೇಲೆ ಹೊತ್ತು ಅದನ್ನ ಇನ್ನೊಂದೆಡೆ ನೆಟ್ಟಿದ್ದಾರೆ.
ಚಾಲಕನಿಗೆ ಖುಲಾಯಿಸಿದ ಅದೃಷ್ಟ, ದುಬೈಗೆ ದುಡಿಯಲು ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು –ಲಾಟರಿಯಲ್ಲಿ 40 ಕೋಟಿ ಜಾಕ್ ಪಾಟ್
ಅರಣ್ಯನಾಶ ಮಿತಿಮೀರುತ್ತಿರುವ ಈಗಿನ ಕಾಲದಲ್ಲಿ ಒಂದು ಮರದ ಜೀವದ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿ ಅದಕ್ಕೆ ಮರುಜೀವ ನೀಡಿದ ಈ ಯುವಕರ ಕಾರ್ಯಕ್ಕೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.