ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಪೊಳಲಿ ಸಮೀಪ ಕೊಳತ್ತಮಜಲಿನಲ್ಲಿ ವ್ಯಕ್ತಿಯೊಬ್ಬ ತನಗೆ ಕಚ್ಚಿದ ಹಾವಿನೊಂದಿಗೆ ಚಿಕಿತ್ಸೆಗೆ ಬಂದ ಘಟನೆ ನಡೆದಿದೆ.
ಅರಳ ನಿವಾಸಿ ಹಾವು ಹಿಡಿಯಲು ಹೋದ ಸಂದರ್ಭದಲ್ಲಿ ನಾಗರಹಾವು ಕೈಗೆ ಕಚ್ಚಿದೆ. ಗಾಯವಾದರೂ ಛಲ ಬಿಡದ ಅವರು ತನಗೆ ಕಚ್ಚಿದ ಹಾವನ್ನು ಹಿಡಿದು ನಾಟಿ ವೈದ್ಯ ಜನಾರ್ಧನ ಹೆಚ್.ಎಸ್. ಕೊಳತ್ತಮಜಲು ಅವರ ಬಳಿಗೆ ಬಂದಿದ್ದಾರೆ. ವ್ಯಕ್ತಿಗೆ ಕಡಿದಿರುವುದು ನಾಗರಹಾವು ಎಂದು ಗೊತ್ತಾಗಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಬಳಿಕ ಗಾಯಾಳು ಚೇತರಿಸಿಕೊಂಡಿದ್ದಾರೆ. ಈ ವಿಚಾರ ಭಾರೀ ಚರ್ಚೆಯಾಗಿದೆ.