ಬ್ಯಾಟರಿ ಚಾಲಿತ, ಮೆಥನಾಲ್ ಹಾಗೂ ಎಥನಾಲ್ ಚಾಲಿತ ವಾಹನಗಳ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಲು ಎರಡು ಯೋಜನೆಗಳು ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವಾಲಯವು ತಿದ್ದುಪಡಿ ಮಾಡಿದೆ.
ಈ ಮೂಲಕ ಬ್ಯಾಟರಿ/ಮೆಥನಾಲ್/ಎಥನಾಲ್ ಚಾಲಿತ ಮೋಟರ್ ಕ್ಯಾಬ್‌ಗಳ ಬಳಕೆಗೆ ಅನುವು ಮಾಡಿಕೊಡಲು 1989ರ ರೆಂಟ್-ಎ-ಕ್ಯಾಬ್ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ. ತನ್ಮೂಲಕ ಮೇಲ್ಕಂಡ ವಾಹನಗಳಿಗೆ ಕಾಯಿದೆಯ ಸೆಕ್ಷನ್ 66ರಿಂದ ವಿನಾಯಿತಿ ನೀಡಲಾಗಿದೆ.
ಬೆಚ್ಚಿಬಿದ್ದ ಬೆಣ್ಣೆನಗರಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ
ಇದೇ ರೀತಿ, ಬ್ಯಾಟರಿ/ಮೆಥನಾಲ್/ಎಥನಾಲ್ ಚಾಲಿತ ಮೋಟರ್ ಬೈಕ್ ಗಳ ಬಳಕೆಗೆ ಅನುವು ಮಾಡಿಕೊಡಲು 1997ರ ರೆಂಟ್-ಎ-ಮೋಟರ್ ಸೈಕಲ್ ಕಾಯಿದೆಗೆ ತಿದ್ದುಪಡಿ ತಂದಿದ್ದು, ಕಾಯಿದೆಯ 74ನೇ ಸೆಕ್ಷನ್‌ನಿಂದ ವಿನಾಯಿತಿ ನೀಡಲಾಗಿದೆ.
ಕ್ಯಾಬ್ ಹಾಗೂ ಮೋಟರ್ ಸೈಕಲ್‌ಗಳನ್ನು ಬಾಡಿಗೆಗೆ ಪಡೆಯಲು ಇರುವ ಸ್ಕೀಂಗಳಿಗೆ ಮಾರ್ಗಸೂಚಿಗಳನ್ನು ಈ ಮುನ್ನ ಸಚಿವಾಲಯವು ಹೊರಡಿಸಿತ್ತು.