alex Certify ಅಚ್ಚರಿಗೆ ಕಾರಣವಾಗಿದೆ ಬಲು ಅಪರೂಪದ ಪಾರದರ್ಶಕ ಆಕ್ಟೋಪಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಬಲು ಅಪರೂಪದ ಪಾರದರ್ಶಕ ಆಕ್ಟೋಪಸ್

Transparent Octopus Captured in Rare Underwater Footage by Ocean Research Institute

ನಮ್ಮ ಸುತ್ತಮುತ್ತಲಿನ ಗಿಡ-ಮರ, ಪ್ರಾಣಿ-ಪಕ್ಷಿಗಳ ಚಟುವಟಿಕೆಗಳು ಬಹಳ ಕುತೂಹಲಕಾರಿಯಾಗಿದೆ. ಇಲ್ಲಿ ಕಾಣಸಿಗುವ ಕೆಲವೊಂದು ವಿಷಯಗಳು ನಮ್ಮನ್ನು ಚಕಿತಗೊಳಿಸುತ್ತದೆ. ಅಂತೆಯೇ ಸಾಗರದಾಳದಲ್ಲೂ ಅನೇಕ ಅದ್ಭುತ ಜೀವರಾಶಿಗಳು ಇದ್ದಾವೆ. ಸದ್ಯ ಪಾರದರ್ಶಕ ಆಕ್ಟೋಪಸ್ ಇದೀಗ ಎಲ್ಲರ ಗಮನ ಸೆಳೆದಿದೆ.

ಗ್ಲಾಸ್ ಆಕ್ಟೋಪಸ್ ಎಂದು ಕರೆಯಲ್ಪಡುವ ಈ ಜೀವಿಯು ಮಧ್ಯ ಫೆಸಿಫಿಕ್ ಸಾಗರದಲ್ಲಿ ಕಂಡುಬಂದಿದೆ. ಈ ಅಪರೂಪದ ಬೆರಗುಗೊಳಿಸುವ ದೃಶ್ಯ ವಿಜ್ಞಾನಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಫಿನಿಕ್ಸ್ ದ್ವೀಪಸಮೂಹವನ್ನು ಸಂಶೋಧಿಸಲು ಸ್ಮಿತ್ ಓಷನ್ ಇನ್ಸ್ಟಿಟ್ಯೂಟ್ ನ ಸಂಶೋಧನಾ ನೌಕೆಯಲ್ಲಿದ್ದ ವಿಜ್ಞಾನಿಗಳು ಈ ಆವಿಷ್ಕಾರ ಮಾಡಿದ್ದಾರೆ. ಆಳಸಮುದ್ರದ ಅಧ್ಯಯನ ಮಾಡುತ್ತಿದ್ದ ವೇಳೆ ಸಂಪೂರ್ಣ ಪಾರದರ್ಶಕ ಆಕ್ಟೋಪಸ್ ನ ದೃಶ್ಯವನ್ನು ಸೆರೆಹಿಡಿದಿದ್ದಾರೆ.

ವಿಮಾನದಲ್ಲಿ ಹೆಚ್ಚುವರಿ ಲಗೇಜ್​​ ಕೊಂಡೊಯ್ಯಲು ಈಕೆ ಮಾಡಿದ ಪ್ಲಾನ್​ ನೋಡಿದ್ರೆ ಶಾಕ್​ ಆಗ್ತೀರಾ….!

ಸೆರೆ ಹಿಡಿದಿರುವ ದೃಶ್ಯದಲ್ಲಿ ಮೂರು ವಿಶೇಷತೆಗಳು ಕಾಣಸಿಗುತ್ತವೆ. ಆಕ್ಟೋಪಸ್ ನ ಆಪ್ಟಿಕ್ ನರ, ಕಣ್ಣುಗುಡ್ಡೆಗಳು ಮತ್ತು ಜೀರ್ಣಾಂಗ ವ್ಯವಸ್ಥೆ ಮಾತ್ರ ಕಾಣಸಿಗುತ್ತದೆ. ಹೀಗಾಗಿ ಈ ಗ್ಲಾಸ್ ಆಕ್ಟೋಪಸ್ ಕುತೂಹಲ ಕೆರಳಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

https://www.instagram.com/p/CQmizx-hNlu/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...