alex Certify ವಿಮಾನದಲ್ಲಿ ಹೆಚ್ಚುವರಿ ಲಗೇಜ್​​ ಕೊಂಡೊಯ್ಯಲು ಈಕೆ ಮಾಡಿದ ಪ್ಲಾನ್​ ನೋಡಿದ್ರೆ ಶಾಕ್​ ಆಗ್ತೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಹೆಚ್ಚುವರಿ ಲಗೇಜ್​​ ಕೊಂಡೊಯ್ಯಲು ಈಕೆ ಮಾಡಿದ ಪ್ಲಾನ್​ ನೋಡಿದ್ರೆ ಶಾಕ್​ ಆಗ್ತೀರಾ….!

ವಿಮಾನಯಾನ ಮಾಡೋದು ಬಹುತೇಕರಿಗೆ ಖುಷಿಯ ವಿಚಾರವಾಗಿದ್ದರೂ ಸಹ ವಿಮಾನಯಾನ ಕಂಪನಿಗಳ ಕೆಲವೊಂದು ನಿಯಮಾವಳಿಗಳು ತಲೆಬೇನೆ ಎನಿಸುವಂತೆ ಮಾಡುತ್ತದೆ.

ಅದರಲ್ಲೂ ಬ್ಯಾಗುಗಳ ವಿಚಾರದಲ್ಲಂತೂ ವಿವಿಧ ವಿಮಾನಯಾನ ಕಂಪನಿಗಳು ತಮ್ಮದೇ ಆದ ನಿಯಮಾವಳಿಗಳನ್ನ ಹೊಂದಿವೆ.

ಹೆಚ್ಚುವರಿ ಲಗೇಜ್​ಗಳನ್ನ ತರುವವರಿಗೆ ಹೆಚ್ಚುವರಿ ಶುಲ್ಕವನ್ನೂ ವಿಧಿಸಲಾಗುತ್ತದೆ.
ಟಿಕ್​ಟಾಕ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ಅಶ್ಲೀನ್​ ಎಂಬಾಕೆ ಹೆಚ್ಚುವರಿ ಬ್ಯಾಗ್​ನ್ನು ಶುಲ್ಕವಿಲ್ಲದೇ ವಿಮಾನದಲ್ಲಿ ಹೊತ್ತೊಯ್ಯಲು ತಾನು ಮಾಡಿದ ಮಾಸ್ಟರ್​ ಪ್ಲಾನ್​ ಏನಿತ್ತು ಅನ್ನೋದನ್ನ ವಿವರಿಸಿದ್ದಾಳೆ.

ವಿಮಾನದಲ್ಲಿ ಹೆಚ್ಚುವರಿ ಬ್ಯಾಗುಗಳಿಗೆ 44 ಡಾಲರ್​ ಹಣವನ್ನ ಪಾವತಿ ಮಾಡಬೇಕಿತ್ತು. ಕೇವಲ ಒಂದು ಬ್ಯಾಗ್​ಗೆ ಮಾತ್ರ ಅವಕಾಶ ನೀಡಲಾಗಿತ್ತು.
ಹೆಚ್ಚುವರಿ ಶುಲ್ಕದಿಂದ ಪಾರಾಗಬೇಕು ಅಂತಾ ಅಶ್ಲೀನ್​ ಗರ್ಭಿಣಿ ಎಂದು ನಾಟಕ ಮಾಡಿದ್ದಾಳೆ. ಹೆಚ್ಚುವರಿ ಬ್ಯಾಗನ್ನು ಹೊಟ್ಟೆಯೊಳಗೆ ತುಂಬಿಕೊಂಡು ತಾನು ಗರ್ಭಿಣಿ ಎಂದು ಹೇಳಿದ್ದಾಳೆ. ಈ ವಿಡಿಯೋ ಟಿಕ್​ಟಾಕ್​ ಮಾತ್ರವಲ್ಲದೇ ಯುಟ್ಯೂಬ್​ನಲ್ಲಿಯೂ ಸಿಕ್ಕಾಪಟ್ಟೆ ಫೇಮಸ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...