alex Certify ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ : ಇಂದಿನಿಂದ ಕೌನ್ಸಲಿಂಗ್ ಪ್ರಕ್ರಿಯೆ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ : ಇಂದಿನಿಂದ ಕೌನ್ಸಲಿಂಗ್ ಪ್ರಕ್ರಿಯೆ ಆರಂಭ

ಕಲಬುರಗಿ : ಸರಕಾರಿ ಪ್ರಾಥಮಿಕ ಶಾಲಾ ಹಾಗೂ ಪ್ರೌಢ ಶಾಲಾ ಶಿಕ್ಷಕರ 2022-23ನೇ ಸಾಲಿನ ಸಾಮಾನ್ಯ ಕೋರಿಕೆ ವರ್ಗಾವಣೆಗೆ ಈಗಾಗಲೆ ಬಿ.ಇ.ಓ ಕಚೇರಿಯಲ್ಲಿ ಆದ್ಯತಾ ಪಟ್ಟಿ ಪ್ರಕಟಿಸಿದ್ದು, ಇದೇ ಜುಲೈ 11 ರಿಂದ 14 ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿಯ ಬಿ.ಆರ್.ಸಿ ಕಾರ್ಯಾಲಯದಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯಲಿದೆ. ಅರ್ಹ ಶಿಕ್ಷಕರು ನಿಗದಿಪಡಿಸಿದ ದಿನಾಂಕಗಳಂದು ಕೌನ್ಸಲಿಂಗ್‍ಗೆ ಹಾಜರಾಗಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ಉಪನಿರ್ದೇಶಕ (ಆಡಳಿತ) ಸಕ್ರೆಪ್ಪಗೌಡ ಬಿರಾದಾರ ಅವರು ತಿಳಿಸಿದ್ದಾರೆ.

 ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ನಿಗದಿತ ದಿನದಂದು ಕ್ರಮ ಸಂಖ್ಯೆವಾರು ಕೌನ್ಸಲಿಂಗ್ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ.

ಪ್ರಾಥಮಿಕ ವಿಭಾಗ (ಸ್ಥಳ: ಬಿ.ಆರ್.ಸಿ ದಕ್ಷಿಣ ವಲಯ ಕಚೇರಿ): ಜುಲೈ 11 ರಂದು ಆದ್ಯತಾ ಪಟ್ಟಿ ಕ್ರಮ ಸಂಖ್ಯೆ 1 ರಿಂದ 38ರ ವರೆಗಿನ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಹಾಗೂ ಆದ್ಯತಾ ಪಟ್ಟಿ ಕ್ರಮ ಸಂಖ್ಯೆ 1 ರಿಂದ 500ರ ವರೆಗಿನ ಪ್ರಾಥಮಿಕ ಶಾಲಾ ಸಹ ಶಿಕ್ಷಕರು, ಜುಲೈ 12 ರಂದು ಆದ್ಯತಾ ಪಟ್ಟಿ ಕ್ರಮ ಸಂಖ್ಯೆ 501 ರಿಂದ 1400ರ ವರೆಗಿನ ಪ್ರಾಥಮಿಕ ಶಾಲಾ ಸಹ ಶಿಕ್ಷಕರು, ಜುಲೈ 13 ರಂದು ಆದ್ಯತಾ ಪಟ್ಟಿ ಕ್ರಮ ಸಂಖ್ಯೆ 1401 ರಿಂದ 2391ರ ವರೆಗಿನ ಪ್ರಾಥಮಿಕ ಶಾಲಾ ಸಹ ಶಿಕ್ಷಕರು, ಆದ್ಯತಾ ಪಟ್ಟಿ ಕ್ರಮ ಸಂಖ್ಯೆ 1 ರಿಂದ 42ರ ವರೆಗಿನ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಆದ್ಯತಾ ಪಟ್ಟಿ ಕ್ರಮ ಸಂಖ್ಯೆ 01 ರಿಂದ 01 ಪ್ರಾಥಮಿಕ ಶಾಲಾ ವಿಶೇಷ ಶಿಕ್ಷಕರು ಕೌನ್ಸಿಲಿಂಗ್‍ಗೆ ಹಾಜರಾಗಬೇಕು.

ಪ್ರೌಢ ಶಾಲಾ ವಿಭಾಗ (ಸ್ಥಳ: ಉಪನಿರ್ದೇಶಕರ ಕಚೇರಿ): ಜುಲೈ 13 ರಂದು ಆದ್ಯತಾ ಪಟ್ಟಿ ಕ್ರಮ ಸಂಖ್ಯೆ 1 ರಿಂದ 400ರ ವರೆಗಿನ ಪ್ರೌಢ ಶಾಲಾ ಸಹ ಶಿಕ್ಷಕರು. ಜುಲೈ 14 ರಂದು ಆದ್ಯತಾ ಪಟ್ಟಿ ಕ್ರಮ ಸಂಖ್ಯೆ 401 ರಿಂದ 758ರ ವರೆಗಿನ ಪ್ರೌಢ ಶಾಲಾ ಸಹ ಶಿಕ್ಷಕರು, ಆದ್ಯತಾ ಪಟ್ಟಿ ಕ್ರಮ ಸಂಖ್ಯೆ 01 ರಿಂದ 85ರ ವರೆಗಿನ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು (ಖಿಈಐ) ಶಿಕ್ಷಕರು ಹಾಗೂ ಆದ್ಯತಾ ಪಟ್ಟಿ ಕ್ರಮ ಸಂಖ್ಯೆ 01 ರಿಂದ 63ರ ವರೆಗಿನ ಪ್ರೌಢ ಶಾಲಾ ವಿಶೇಷ ಶಿಕ್ಷಕರು ಕೌನ್ಸಿಲಿಂಗ್‍ಗೆ ಹಾಜರಾಗಬೇಕು.

  ಈಗಾಗಲೇ ಪ್ರಕಟಿಸಲಾದ ಆದ್ಯತಾ ಪಟ್ಟಿಯು ಸೇವಾ ಪುಸ್ತಕದಂತೆ ನೊಂದಾಯಿಸಲಾದ ಇ.ಇ.ಡಿ.ಎಸ್ ಮಾಹಿತಿಯನ್ನಾಧರಿಸಿ ಹಾಗೂ ಶಿಕ್ಷಕರು ಸಲ್ಲಿಸಿರುವ ವರ್ಗಾವಣೆ ಅರ್ಜಿ ಆಧರಿಸಿ ನಿಯಮಾನುಸಾರ ಪ್ರಕಟಗೊಂಡಿರುತ್ತದೆ. ಅದಾಗ್ಯೂ ಕೂಡಾ ಶಿಕ್ಷಕರ ನೇಮಕಾತಿ ಆದೇಶದಂತೆ ವಿಷಯ ಹೊಂದಾಣಿಕೆ ಪರಿಶೀಲಿಸಿದ ನಂತರವೇ ಕೌನ್ಸಿಲಿಂಗ್‍ಗೆ ಅವಕಾಶ ನೀಡಲಾಗುವುದು.

ಒಂದು ವೇಳೆ ಯಾವುದೇ ಮಾಹಿತಿ ವ್ಯತಿರಿಕ್ತ ಇದ್ದ ಪಕ್ಷದಲ್ಲಿ, ಕಲ್ಪಿಸಲಾಗುವುದಿಲ್ಲ. ಈಗಾಗಲೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾದ ಶಿಕ್ಷಕರ ನೈಜತೆಯು ಅನರ್ಹತೆ ಹೊಂದಿದಲ್ಲಿ ಮತ್ತು ವೈದ್ಯಕೀಯ ತಪಾಸಣೆಗೆ ಶಿಕ್ಷಕರು ಗೈರುಹಾಜರಾಗಿದ್ದಲ್ಲಿ ಅಂತಹ ಶಿಕ್ಷಕರಿಗೆ ಕೌನ್ಸಿಲಿಂಗ್‍ಗೆ ಅವಕಾಶ ಕಲ್ಪಿಸಲಾಗುವುದಿಲ್ಲ.

ಇನ್ನು ವರ್ಗಾವಣೆ ತಂತ್ರಾಂಶÀದಲ್ಲಿ ಶಿಕ್ಷಕರು ತಪ್ಪು ಮಾಹಿತಿ ಭರ್ತಿ ಮಾಡಿದ ಕಾರಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಡಿ.ಡಿ.ಪಿ.ಐ ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...