alex Certify SSLC ಸೇರಿ ವಿವಿಧ ವಿದ್ಯಾರ್ಹತೆಯವರಿಗೆ ಉದ್ಯೋಗಾವಕಾಶ: ಯುವಕರಿಗೆ ಸರ್ಕಾರದಿಂದ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SSLC ಸೇರಿ ವಿವಿಧ ವಿದ್ಯಾರ್ಹತೆಯವರಿಗೆ ಉದ್ಯೋಗಾವಕಾಶ: ಯುವಕರಿಗೆ ಸರ್ಕಾರದಿಂದ ಗುಡ್ ನ್ಯೂಸ್

ದಾವಣಗೆರೆ: 2021-22 ನೇ ಸಾಲಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹರಿಹರ ಇಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ (ಎಸ್‍ಸಿಪಿ-ಟಿಎಸ್‍ಪಿ) ಮೂಲಕ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಲು ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್.ಎಸ್.ಎಲ್.ಸಿ/ಐ.ಟಿ.ಐ/ಡಿಪ್ಲೋಮ/ಬಿ.ಇ ಪಾಸ್ ಆಗಿರುವ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ/ಯುವತಿಯರಿಗೆ 2 ಮತ್ತು 4 ತಿಂಗಳ ಅವಧಿಯ ವಿವಿಧ ಉಚಿತ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲಾಗುವುದು.

ಡೊಮೆಸ್ಟಕ್ ಡಾಟಾ ಎಂಟ್ರಿ ಆಪರೇಟರ್, ಸಿ.ಎನ್.ಸಿ ಆಪರೇಟ್ ಟರ್ನಿಂಗ್, ಸಿ.ಎನ್.ಸಿ ಪ್ರೋಗ್ರಾಮರ್, ಕನ್‍ವೆನ್‍ಷನಲ್ ಟರ್ನಿಂಗ್ ಮಷಿನ್ ಆಪರೇಟರ್, ಮಿಲ್ಲಂಗ್ ಮಷಿನ್ ಆಪರೇಟರ್, ಸರ್ಫೇಸ್ ಗ್ರೈಂಡಿಂಗ್ ಮಷಿನ್ ಆಪರೇಟರ್, ಡಿಸೈನರ್-ಮೆಕಾನಿಕಲ್, ಪ್ರೊಡಕ್ಷನ್ ಇಂಜಿನಿಯರ್ ಕೋರ್ಸ್‍ಗಳಲ್ಲಿ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುವುದು.

ತರಬೇತಿ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲಾಗುವುದು. ತರಬೇತಿ ಮುಗಿದ ನಂತರ ಉದ್ಯೋಗವಕಾಶಕ್ಕೆ ಮಾರ್ಗದರ್ಶನ ಮಾಡಲಾಗುವುದು. ಅರ್ಜಿ ಸಲ್ಲಿಸಲು ಏ.30 ಕೊನೆಯ ದಿನಾಂಕ ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಜಿ.ಟಿ.ಟಿ.ಸಿ, 22ಸಿ&ಡಿ, ಕೆಐಎಡಿಬಿ, ಇಂಡಸ್ಟ್ರಿಯಲ್ ಏರಿಯ, ಹರ್ಲಾಪುರ, ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರ ಹರಿಹರ ದೂರವಾಣಿ ಸಂಖ್ಯೆ: 08192243937, 9916908111, 8884488202, 8711913947 ನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಪ್ರಾಂಶುಪಾಲರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...