alex Certify ಶಾಕಿಂಗ್​: ಬ್ಲೂಟೂತ್​​​ ಹೆಡ್​ಫೋನ್ ಸ್ಫೋಟ – ​ಯುವಕ ಸಾವು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಬ್ಲೂಟೂತ್​​​ ಹೆಡ್​ಫೋನ್ ಸ್ಫೋಟ – ​ಯುವಕ ಸಾವು….!

ಬ್ಲೂಟೂತ್​​ ಹೆಡ್​ಫೋನ್​ ಸ್ಪೋಟಗೊಂಡ ಪರಿಣಾಮ ಯುವಕ ಸಾವನ್ನಪ್ಪಿದ ದಾರುಣ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ನಡೆದಿದೆ. ವೈರ್​ಲೆಸ್​ ಹೆಡ್​ಫೋನ್​ ಸ್ಫೋಟಗೊಂಡ ಆಘಾತಕ್ಕೆ ಯುವಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಮೃತ ಯುವಕನನ್ನು ಉದೈಪುರಿಯಾ ನಿವಾಸಿ ರಾಕೇಶ್​ ಎಂದು ಗುರುತಿಸಲಾಗಿದೆ. ಈತ ಬ್ಲೂಟೂತ್​​ ಹೆಡ್​ಫೋನ್​ ಬಳಸಿ ಫೋನ್​ ಕರೆಯಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದೆ. ಕೂಡಲೇ ಈ ಸಾಧನವು ಸ್ಫೋಟಗೊಂಡಿದೆ. ಇದರಿಂದ ರಾಕೇಶ್​ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ರಾಕೇಶ್​ನ ಎರಡೂ ಕಿವಿಗಳಿಗೂ ಗಂಭೀರ ಗಾಯವಾಗಿತ್ತು. ಕೂಡಲೇ ಈತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

ಇನ್ನು ಈ ವಿಚಾರವಾಗಿ ಮಾತನಾಡಿದ ವೈದ್ಯ ಎಲ್​.ಎನ್​​ ರುಂದ್ಲಾ, ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದಾಗಲೇ ಸಾವನ್ನಪ್ಪಿದ್ದಾನೆ. ಬಹುಶಃ ಇದು ದೇಶದಲ್ಲೇ ಮೊದಲ ಘಟನೆ ಇರಬಹುದು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...