alex Certify BIG NEWS: ರಿಯಾಯಿತಿ ದಂಡ ಪಾವತಿ ಗಡುವು ಮುಕ್ತಾಯ; 9 ಕೋಟಿಗೂ ಅಧಿಕ ದಂಡದ ಹಣ ಸಂಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಿಯಾಯಿತಿ ದಂಡ ಪಾವತಿ ಗಡುವು ಮುಕ್ತಾಯ; 9 ಕೋಟಿಗೂ ಅಧಿಕ ದಂಡದ ಹಣ ಸಂಗ್ರಹ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ರಿಯಾಯಿತಿ ದರದಲ್ಲಿ ದಂಡ ಪಾವತಿ ಗಡುವು ಮುಕ್ತಾಯವಾಗಿದ್ದು, 9 ಕೋಟಿಗೂ ಅಧಿಕ ದಂಡದ ಹಣವನ್ನು ಸಂಗ್ರಹಿಸಲಾಗಿದೆ.

ಶೇ.50ರಷ್ಟು ರಿಯಾಯಿತಿ ದಂಡ ಪಾವತಿ ಗಡುವು ಶನಿವಾರ ಮುಕ್ತಾಯವಾಗಿದ್ದು, ಒಂದೇ ದಿನದಲ್ಲಿ ವಾಹನ ಸವಾರರು ಕೋಟ್ಯಂತರ ರೂಪಾಯಿ ದಂಡ ಪವತಿಸಿದ್ದಾರೆ. ರಿಯಾಯಿತಿ ದಂಡ ಜಾರಿಯಾದಾಗಿನಿಂದ ಈವರೆಗೆ 9 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗಿದೆ.

ಜುಲೈ 6ರಿಂದ ಸೆಪ್ಟೆಂಬರ್ 9ರವರೆಗೆ ಒಟ್ಟು 2,92,792 ಲಕ್ಷ ಪ್ರಕರಣಗಳಿಂದ ಬರೋಬ್ಬರಿ 9.24 ಕೋಟಿ ರೂಪಾಯಿಗೂ ಹೆಚ್ಚು ದಂಡ ಪಾವತಿಯಾಗಿದೆ ಎಂದು ಸಂಚಾರಿ ವಿಭಾಗದ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...