ಹುಲಿಯೊಂದು ರಾಜಗಾಂಭೀರ್ಯದಲ್ಲೆ ರಸ್ತೆ ದಾಟುವಾಗ ಅದಕ್ಕೆ ಅಡಚಣೆಯಾಗದಂತೆ ಪೊಲೀಸರು ಪ್ರಯಾಣಿಕರನ್ನು ತಡೆದು ನಿಲ್ಲಿಸಿದ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನೋಡಲು ಬಹಳ ಮುದವೆನಿಸುತ್ತದೆ.
ಸಂಚಾರಿ ಪೊಲೀಸ್ ಸಿಬ್ಬಂದಿ ರಸ್ತೆಯ ಎರಡೂ ಬದಿಯ ಸಿಗ್ನಲ್ನಲ್ಲಿ ಪ್ರಯಾಣಿಕರನ್ನು ನಿಲ್ಲಿಸಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆರಂಭದಲ್ಲಿ ಹುಲಿ ಹೆದ್ದಾರಿ ಬಳಿ ಕಾಣಿಸಿದೆ. ಬಳಿಕ ಅದನ್ನು ದಾಟಲು ಪ್ರಯತ್ನಿಸುತ್ತಿರುವುದನ್ನು ಪೊಲೀಸ್ ಗಮನಿಸಿದ್ದಾರೆ.
ನಂತರ ಅವರ ಸಕಾಲಿಕ ಮಧ್ಯಪ್ರವೇಶದಿಂದಾಗಿ ಹುಲಿ ರಸ್ತೆ ದಾಟಲು ಸಾಧ್ಯವಾಯಿತು. ಕ್ಲಿಪ್ನ ಅತ್ಯಂತ ಅಚ್ಚರಿ ವಿಷಯ ಎಂದರೆ ಹುಲಿ ಶಾಂತವಾಗಿತ್ತು, ಎಲ್ಲಾ ವಾಹನ ಸವಾರರೂ ತಾಳ್ಮೆಯಿಂದ ಕಾಯುತ್ತಿದ್ದರು.
ವಿಡಿಯೋ ಎಲ್ಲಿ ಶೂಟ್ ಮಾಡಿದ್ದೆಂದು ಗೊತ್ತಾಗಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ಗಳಿಸಿದೆ.
ಇದು ಬಹಳ ಅಪರೂಪದ ಸನ್ನಿವೇಶ. ಈ ಹುಲಿ ಮಾನವ ಉಪಸ್ಥಿತಿಯನ್ನು ಒಪ್ಪಿಕೊಂಡಿದೆಯೇ ಅಥವಾ ಹಸಿವಿನಿಂದಿರಲಿಲ್ಲವೇ? ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹುಲಿ ಸುಲಭವಾಗಿ ಸಾಗಲು ಹಸಿರು ಕಾರಿಡಾರ್ಗಳು ಬೇಕು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರ