ಇತ್ತೀಚೆಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಸುರಿದಿದೆ. ತಿರುಪತಿ ತಿಮ್ಮಪ್ಪನಿಗೆ ಜಲದಿಗ್ಬಂಧನ ಆಗಿತ್ತು. ಚಿತ್ತೂರು, ಅನಂತಪುರ ಜಿಲ್ಲೆಗಳಲ್ಲಿ ಭಾರಿ ಮಳೆಗೆ 20ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ ಆಂಧ್ರಪ್ರದೇಶದಲ್ಲಿ ಕಳೆದ ಒಂದೇ ವಾರದಲ್ಲಿ ಮಳೆಯಿಂದಾಗಿ ಸಂಭವಿಸಿದ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 33 ಆಗಿದೆ.
ಇಂಥ ಸಂದರ್ಭದಲ್ಲಿ ನೆಲ್ಲೂರು ಪೊಲೀಸ್ ಸಿಬ್ಬಂದಿಯೊಬ್ಬರು ಪ್ರವಾಹದ ನೀರಲ್ಲಿ ಸಿಲುಕಿದ್ದ ಅರ್ಚಕರೊಬ್ಬರನ್ನು ಸಾಹಸಮಯವಾಗಿ ರಕ್ಷಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದ್ದು, ಆಂಧ್ರಪ್ರದೇಶ ಪೊಲೀಸರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಟನ್ ಚೀಲ ಕದ್ದೊಯ್ದ ನಾಯಿಯನ್ನು ಅಟ್ಟಾಡಿಸಿ ಕೊಂದ ವ್ಯಕ್ತಿ ವಿರುದ್ಧ FIR
ಕೊಡವಲೂರು ಶಿವ ದೇವಸ್ಥಾನದ ಅರ್ಚಕರು ಬೈಕ್‌ನಲ್ಲಿ ಸಾಗುತ್ತಿದ್ದಾಗ ಪ್ರವಾಹದ ನೀರಿಗೆ ಕೊಚ್ಚಿ ಹೋಗಿದ್ದರು. ಸಹಾಯಕ್ಕಾಗಿ ಕಿರುಚಾಡುತ್ತಿದ್ದ ಅರ್ಚಕರನ್ನು ದೂರದಿಂದ ಗಮನಿಸಿದ ಟ್ರಾಫಿಕ್ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀ ನಾಯಕ್ ಅವರು ಸೊಂಟದ ಮಟ್ಟಕ್ಕಿದ ಪ್ರವಾಹದ ನೀರಿನಲ್ಲೇ ಧುಮುಕಿ, ಹಗ್ಗದ ಸಹಾಯವೊಂದರಿಂದ ಅರ್ಚಕರನ್ನು ರಕ್ಷಿಸಿದ್ದಾರೆ.
ಡಿಜಿಪಿ ಗೌತಮ್ ಸಾವಂಗ್ ಅವರು ನಾಯಕ್ ಅವರ ಸಾಹಸವನ್ನು ಹಾಡಿಹೊಗಳಿದ್ದು, ಜನಸೇವೆ ಹಾಗೂ ರಕ್ಷಣೆಯ ಕರ್ತವ್ಯವನ್ನು ಪ್ರವಾಹದಂತಹ ಆಪತ್ಕಾಲದಲ್ಲೂ ನಿರ್ವಹಿಸಿದ್ದಕ್ಕೆ ಶಹಬ್ಬಾಸ್ ಎಂದಿದ್ದಾರೆ.