alex Certify ಕಬ್ಬನ್ನು ಸಾಗಿಸಲು ಟ್ರ್ಯಾಕ್ಟರ್ ಮುಂಭಾಗವನ್ನೇ ಮೇಲಕ್ಕೆತ್ತಿ ಚಾಲನೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಬ್ಬನ್ನು ಸಾಗಿಸಲು ಟ್ರ್ಯಾಕ್ಟರ್ ಮುಂಭಾಗವನ್ನೇ ಮೇಲಕ್ಕೆತ್ತಿ ಚಾಲನೆ…..!

ರಸ್ತೆಮಾರ್ಗಗಳಲ್ಲಿ ಲೋಡ್ ಸಾಗಿಸುವ ವಾಹನಗಳನ್ನು ನೀವು ನೋಡಿರಬಹುದು. ಕೆಲವೊಮ್ಮೆ, ಓವರ್​ಲೋಡ್​ ಆಗಿ
ಅಪಘಾತ ಆಗಿರುವ ಸುದ್ದಿಗಳನ್ನೂ ಕೇಳಿರುವಿರಿ. ಇಂತಹ ಘಟನೆಗಳು ಚಾಲಕನ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಮಾತ್ರವಲ್ಲದೆ ಮಾರ್ಗದಲ್ಲಿ ಇತರ ಪ್ರಯಾಣಿಕರಿಗೂ ಅಪಾಯವನ್ನುಂಟುಮಾಡುತ್ತದೆ, ನೀವು ಒಪ್ಪುತ್ತೀರಿ ಅಲ್ಲವೇ?

ಆದರೆ ಇಲ್ಲೊಂದು ವೈರಲ್​ ವಿಡಿಯೋ ನೋಡಿದರೆ ನೀವು ಹುಬ್ಬೇರಿಸುತ್ತೀರಿ. ಈ ವಿಡಿಯೋದಲ್ಲಿ ಕಬ್ಬಿನಿಂದ ತುಂಬಿದ ಟ್ರ್ಯಾಕ್ಟರ್​ ಅನ್ನು ನೀವು ನೋಡಬಹುದು. ಚಾಲಕನೊಬ್ಬ ಕಬ್ಬಿನ ಟ್ರಾಕ್ಟರ್ ಅನ್ನು ಚಾಲನೆ ಮಾಡುತ್ತಿರುವುದನ್ನು ಇದು ತೋರಿಸುತ್ತದೆ.

ಆದರೆ ಕಬ್ಬಿನ ಕಟ್ಟುಗಳಿಂದ ತುಂಬಿದ ಟ್ರ್ಯಾಕ್ಟರ್​ ಸಮತೋಲನ ಕಾಪಾಡುವ ಸಲುವಾಗಿ ಚಾಲಕ ಟ್ರ್ಯಾಕ್ಟರ್​ ಮುಂಭಾಗವನ್ನು ಮೇಲಕ್ಕೆ ಎತ್ತಿ ಕಬ್ಬಿಗೆ ಆಸರೆ ನೀಡಿದ್ದಾನೆ. ಈ ಮೂಲಕ ನಿಧಾನವಾಗಿ ಟ್ರ್ಯಾಕ್ಟರ್​ ಓಡಿಸುತ್ತಿದ್ದಾರೆ. ಹಲವರು ಇದಕ್ಕೆ ಭೇಷ್​ ಭೇಷ್​ ಎಂದಿದ್ದರೆ, ಇದು ಯಾವ ಸಮಯದಲ್ಲಿ ಬೇಕಾದರೂ ಅಪಘಾತಕ್ಕೆ ಕಾರಣವಾಗಬಹುದು ಎಂದು ಇನ್ನು ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...