ಭಾರತದಲ್ಲಿ ಭಾರೀ ಜನಪ್ರಿಯವಾಗಿರುವ ಇನ್ನೋವಾ ಕ್ರಿಸ್ಟಾ ಎಂಪಿವಿ ಕಾರುಗಳನ್ನು ಈ ವರ್ಷದಲ್ಲಿ ಮತ್ತೆ ರಸ್ತೆಗಿಳಿಸಲಾಗಿದೆ. 2016 ರಲ್ಲಿ ಬಿಡುಗಡೆಯಾದಾಗಿನಿಂದ ಇದುವರೆಗೂ ಕ್ರಿಸ್ಟಾದ ನಾಲ್ಕು ಲಕ್ಷ ಘಟಕಗಳ ಮಾರಾಟ ಮಾಡಲಾಗಿದೆ.
ಇನ್ನೋವಾ ಹೈಕ್ರಾಸ್ ಹಾಗೂ ಇನ್ನೋವಾ ಕ್ರಿಸ್ಟಾಗಳ ಮೂಲಕ ಟೊಯೋಟಾ ಒಮ್ಮೆಲೇ ಎರಡು ಬಹು-ಉದ್ದೇಶದ ವಾಹನಗಳ ಮಾರಾಟ ಮಾಡುತ್ತಿದೆ. 2025ರ ವರೆಗೂ ಇನ್ನೋವಾ ಕ್ರಿಸ್ಟಾಗಳ ಉತ್ಪಾದನೆ ಇರಲಿದೆ ಎಂದು ತಿಳಿಸಲಾಗಿದೆ.
2.4 ಲೀ ಡೀಸೆಲ್ ಅವತಾರದಲ್ಲಿ ಬರುವ ಇನ್ನೋವಾಗೆ ಐದು-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದ್ದು, ಎರಡು ಬಗೆಯ ಸೀಟಿಂಗ್ ಕಾನ್ಫಿಗರೇಷನ್‌ಗಳೊಂದಿಗೆ ಬರುತ್ತದೆ.
ಇದಕ್ಕೂ ಮುನ್ನ ಇನ್ನೋವಾ ಕ್ರಿಸ್ಟಾಗಳ ಉತ್ಪಾದನೆ ನಿಲ್ಲಿಸಿದ್ದ ಟೊಯೋಟಾ, ಸೆಮಿ ಕಂಡಕ್ಟರ್‌ಗಳ ಲಭ್ಯತೆ ಕಾರಣ ಕ್ರಿಸ್ಟಾದ ಉತ್ಪಾದನೆಗೆ ಮರು ಚಾಲನೆ ಕೊಟ್ಟಿತ್ತು.
ಇನ್ನೋವಾದ ಈ ಅವತಾರಗಳಿಗೆ ಭಾರೀ ಬೇಡಿಕೆ ಇರುವ ಕಾರಣ, ಪ್ರಸಕ್ತ ವರ್ಷದಲ್ಲಿ ಕನಿಷ್ಠ 3.20 ಲಕ್ಷ ಘಟಕಗಳ ಉತ್ಪಾದನೆ ಮಾಡಲೆಂದು ಬಿಡದಿಯ ತನ್ನ ಉತ್ಪಾದನಾ ಘಟಕದಲ್ಲಿ ಮೂರನೇ ಶಿಫ್ಟ್ ಪರಿಚಯಿಸಿದೆ ಟೊಯೋಟಾ.
ಮೂರನೇ ಶಿಫ್ಟ್‌ನ ಅಳವಡಿಕೆಯಿಂದಾಗಿ ಪ್ರತಿನಿತ್ಯವೂ ಇನ್ನೋವಾ, ಫಾರ್ಚೂನರ್ ಹಾಗೂ ಹೈಕ್ರಾಸ್‌ಗಳ ಒಟ್ಟಾರೆ 510 ಘಟಕಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಟೊಯೋಟಾದ ಭಾರತೀಯ ಅಂಗ ಪಡೆದಿದೆ. ಪ್ರಸಕ್ತ 380 ಘಟಕಗಳ ಉತ್ಪಾದನಾ ಸಾಮರ್ಥ್ಯವನ್ನು ಟೊಯೋಟಾದ ಬಿಡದಿ ಘಟಕ ಹೊಂದಿದೆ.